ಶುಕ್ರವಾರ, ನವೆಂಬರ್ 22, 2019
27 °C

ಲಕ್ಷ್ಮೇಶ್ವರ: ದಿಂಡಿ ಮಹೋತ್ಸವ

Published:
Updated:

ಲಕ್ಷ್ಮೇಶ್ವರ: ಗುರು ಏಕನಾಥ ಮಹಾರಾಜರ ಷಷ್ಠಿ ನಿಮಿತ್ತ ಸ್ಥಳೀಯ ಪಾಂಡುರಂಗನ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಸಮಾಜ, ಸಂತ ಜ್ಞಾನೇಶ್ವರ ಯುವಕ ಮಂಡಳ ಹಾಗೂ ಹಿಂಗುಲಾಂಬಿಕಾ ಮಹಿಳಾ ಮಂಡಳ ಇವರ ಆಶ್ರಯದಲ್ಲಿ ಸೋಮವಾರ ಮತ್ತು ಮಂಗಳವಾರ ದಿಂಡಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. 

ಉತ್ಸವದ ಅಂಗವಾಗಿ ಪೋತಿ ಪ್ರತಿಷ್ಠಾಪನೆ, ಗುಲಾಲ ಕೀರ್ತನೆ, ಪ್ರವಚನ, ನಾಮಜಪ ಹಾಗೂ ಆಕಾಶವಾಣಿ ಕಲಾವಿದ ಶ್ರೀಕಾಂತ ಬಾಕಳೆ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರತಿಕ್ರಿಯಿಸಿ (+)