ಲಕ್ಷ ರೂ ಮೌಲ್ಯದ ಖೋಟಾ ನೋಟು ಪತ್ತೆ

7

ಲಕ್ಷ ರೂ ಮೌಲ್ಯದ ಖೋಟಾ ನೋಟು ಪತ್ತೆ

Published:
Updated:

ಮಂಡ್ಯ: ನಗರದ ಜನನಿಬಿಡ ವಿಶ್ವೇಶ್ವರಯ್ಯ ರಸ್ತೆಯ ಪ್ರಮುಖ ಹೋಟೆಲ್‌ನಲ್ಲಿ ರೂ. 500 ಮುಖಬೆಲೆ ಒಟ್ಟು 217 ಖೋಟಾ ನೋಟುಗಳಿದ್ದ ಬ್ಯಾಗ್ ಪತ್ತೆಯಾಗಿದೆ. ಅದನ್ನು ನಗರದಲ್ಲಿ ಚಲಾಯಿಸಲು ತಂದಿದ್ದ ಎನ್ನಲಾಗಿರುವ ಯುವಕ ತಲೆಮರೆಸಿಕೊಂಡಿದ್ದಾನೆ.ಇಲ್ಲಿನ ವಿಶ್ರಾಂತ್ ಹೋಟೆಲ್‌ನಲ್ಲಿ ಕೊಠಡಿ ಸಂಖ್ಯೆ 50 ಅನ್ನು ಕೆ.ಜಿ.ಎಫ್ ನಿವಾಸಿ ವಾಸು ಎಂಬ ಹೆಸರನ್ನು ನೀಡಿ ಆರೋಪಿ ಬಾಡಿಗೆಗೆ ಪಡೆದಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕೊಠಡಿಗೆ ದಾಳಿ ಮಾಡಿದಾಗ ಗುರುವಾರ ಖೋಟಾ ನೋಟುಗಳು ಪತ್ತೆಯಾಗಿವೆ.ಎಲ್ಲವೂ ಗುಣಮಟ್ಟದ ಪೇಪರ್‌ನಲ್ಲಿ ಜೆರಾಕ್ಸ್ ಮಾಡಿರುವ ನೋಟುಗಳಾಗಿದ್ದು, ಒಂದೇ ಸಂಖ್ಯೆಯನ್ನು (3ಕೆಎಸ್ 482659) ಅನ್ನು ಹೊಂದಿದ್ದವು ಎಂಬುದು ಗಮನಾರ್ಹ.ಎಲ್ಲ ನೋಟುಗಳು ಐನೂರು ರೂಪಾಯಿ ಮುಖಬೆಲೆಯದಾಗಿದ್ದು, ಒಟ್ಟಾರೆ 217 ನೋಟುಗಳು ಇದ್ದವು. ಇವು ಚಲಾವಣೆಯಾಗಿದ್ದರೆ ಒಟ್ಟು ರೂ. 1,08,500 ಮೊತ್ತದ ಖೋಟಾನೋಟುಗಳು ಮಾರುಕಟ್ಟೆಗೆ ಚಲಾವಣೆಗೆ ಬಂದಂತಾಗುತ್ತಿತ್ತು.ಆರೋಪಿಯ ಚಹರೆಯನ್ನು ಹೋಟೆಲ್‌ನ ಸಿಬ್ಬಂದಿಯಿಂದ ಕಲೆಹಾಕಿರುವ ಪೊಲೀಸರು, ಅವರನ್ನು ಕರೆದುಕೊಂಡು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಗಸ್ತು ತಿರುಗಿದರೂ ಆತ ಪತ್ತೆ ಆಗಿಲ್ಲ. ಈಗ ಸಿಕ್ಕಿರುವಷ್ಟೇ ನೋಟುಗಳನ್ನು ಆರೋಪಿ ತಂದಿದ್ದನೇ, ಈಗಾಗಲೇ ಚಲಾವಣೆಗೆ ಬಿಟ್ಟಿದ್ದಾನೆಯೇ ಎಂಬುದು ಪತ್ತೆಯಾಗಬೇಕಿದೆ.ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ.

ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಕಾಂತರಾಜು  ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry