ಬುಧವಾರ, ಜೂನ್ 16, 2021
27 °C

ಲಕ್ ಖುಲಾಯಿಸಿತಂತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ ಖುಲಾಯಿಸಿತಂತೆ!

ಉರಿಬಿಸಿಲ ಸೂರ್ಯ ಮುಳುಗಿ ತಾರೆಗಳು ಆಕಾಶವನ್ನಲಂಕರಿಸುವ ಸಮಯವಾಗಿದ್ದರೂ ಸಂಜೆಯ ಸಂತೋಷಕೂಟದಲ್ಲಿ ಇರಬೇಕಿದ್ದ ಸಂಭ್ರಮ ಕಳೆಕಟ್ಟಿರಲಿಲ್ಲ. ಗಣ್ಯರು, ತಾರೆಯರ ದಂಡೇ ಹರಿದುಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಅಲ್ಲಿ ಸೇರಿದ್ದು ಬೆರಳಿಕೆಯಷ್ಟು ಜನ ಮಾತ್ರ.ಗೆಲುವಿನ ನಗೆ ತುಳುಕುತ್ತಿದ್ದ ಕೆಂದುಟಿಯನ್ನು ಕೊಂಕಿಸುತ್ತಾ ಕುಳಿತಿದ್ದರು ನಟಿ ರಮ್ಯಾ. ಪಕ್ಕದಲ್ಲೇ ಹರ್ಷಚಿತ್ತ ಮುಖದಲ್ಲಿದ್ದರು ಯಶ್. ಇಬ್ಬರು ಸ್ಟಾರ್‌ಗಳು ಅಲ್ಲಿ ಹಾಜರಿದ್ದರೂ ಸಮಾರಂಭಕ್ಕೆ ಕಳೆಕಟ್ಟದಿರಲು ಮುಖ್ಯಕಾರಣ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅನುಪಸ್ಥಿತಿ.`ಲಕ್ಕಿ~ ಚಿತ್ರದ ಯಶಸ್ಸಿನ ಸಡಗರವನ್ನು ಹಂಚಿಕೊಳ್ಳಲು ಸೇರಿದ್ದ ಕೂಟವದು. ಅನಾರೋಗ್ಯದ ಕಾರಣ ರಾಧಿಕಾ ಸಮಾರಂಭಕ್ಕೆ ಗೈರುಹಾಜರಾಗಿದ್ದರು. ಹೀಗಾಗಿ ಅಲ್ಲಿ ಇರಬೇಕಿದ್ದ ಸಂಭ್ರಮದ ವಾತಾವರಣ ಇರಲಿಲ್ಲ. ಅಂದುಕೊಂಡದ್ದಕಿಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂಬ ಖುಷಿ ನಿರ್ದೇಶಕ ಡಾ.ಸೂರಿ ಅವರದು.ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ ಜನ ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಂತೂ ಅದ್ಭುತ ಯಶಸ್ಸು ಗಳಿಸಿದೆ ಎಂದು ಸಂತಸ ಹಂಚಿಕೊಂಡರು. ಟ್ವಿಟ್ಟರ್, ಫೇಸ್‌ಬುಕ್‌ನಂತಹ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಜನ ಮೆಚ್ಚುಗೆಯ ಮಾತುಗಳನ್ನು ಹರಿಬಿಡುತ್ತಿದ್ದಾರೆ ಎಂಬ ಖುಷಿ ನಟಿ ರಮ್ಯಾ ಅವರದು.

 

`ಲಕ್ಕಿ-ವಿಕ್ಕಿ~ಗೆ ಸಿಕ್ಕ ಪ್ರತಿಕ್ರಿಯೆಯ ಮಳೆಯಲ್ಲಿ ತೋಯ್ದುಹೋಗಿದ್ದರು ನಟ ಯಶ್. ವಿಕ್ಕಿ ಪಾತ್ರ ಹೆಚ್ಚು ವಿಭಿನ್ನವಾಗಿ ಬಂದಿದೆ ಎಂಬ ಪ್ರಶಂಸೆಗಳು ಅವರಿಗೆ ದೊರಕಿದೆಯಂತೆ.ಇದಕ್ಕೆಲ್ಲ ಕಾರಣ ಡಾ. ಸೂರಿ. ಇದು ನಿರ್ದೇಶಕರ ಮೊದಲ ಚಿತ್ರ ಎನಿಸಲಿಲ್ಲ. ತೆರೆಯ ಮೇಲೆ ನಮ್ಮನ್ನು ಚೆನ್ನಾಗಿ ತೋರಿಸಿದ್ದಾರೆ ಎಂದು ಪುಳಕಿತರಾದ ಯಶ್, ತೆರೆ ಮೇಲಿನ ನನ್ನ ಮತ್ತು ರಮ್ಯಾ ಜೋಡಿಯನ್ನು ಜನ ಇಷ್ಟಪಡುತ್ತಿದ್ದಾರೆ ಎಂದು ತುಸು ನಾಚಿಕೊಂಡರು.ಬರೀ ಕಥೆ ಇದ್ದರೆ ಉತ್ತಮ ಚಿತ್ರವಾಗುವುದಿಲ್ಲ. ಕಥೆ ನನ್ನದಾದರೂ ಅದನ್ನು ತೆರೆಯ ಮೇಲೆ ಡಾ.ಸೂರಿ ಸುಂದರವಾಗಿ ಮೂಡಿಸಿದ್ದಾರೆ ಎಂದು ಹೊಗಳಿದರು ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ ಗೌಸ್‌ಪೀರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.