ಶನಿವಾರ, ಜೂನ್ 19, 2021
28 °C

ಲಖನೌ, ಜಬಲ್‌ಪುರಕ್ಕೆ ನೇರ ಸಂಪರ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಿಂದ ಉತ್ತರ ಭಾರತದ ಹಲವು ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ 3 ಹೊಸ ಎಕ್ಸ್‌ಪ್ರೆಸ್‌­ಗಳನ್ನು ನೈರುತ್ಯ ರೈಲ್ವೆ ಶನಿವಾರ ಆರಂಭಿಸಿದೆ. ಈ ರೈಲುಗಳ ಮೂಲಕ ಜಬಲ್‌ಪುರ, ಅಲಹಾಬಾದ್‌, ಅಮೇಥಿ, ರಾಯ್‌ ಬರೇಲಿ ಮತ್ತು ಲಖನೌ ನಗರಗಳಿಗೆ  ಬೆಂಗಳೂರಿನಿಂದ ನೇರ ಸಂಪರ್ಕ ದೊರೆತಿದೆ.ಯಶವಂತಪುರ–ಜಬಲ್‌ಪುರ (ಸಾಪ್ತಾ­ಹಿಕ ಎಕ್ಸ್‌ಪ್ರೆಸ್‌), ಯಶವಂತ­ಪುರ–ಕಾಚಿಗುಡ (ವಾರಕ್ಕೆ ಮೂರು ಬಾರಿ, ತ್ರಿ–ಸಾಪ್ತಾಹಿಕ ಎಕ್ಸ್‌ಪ್ರೆಸ್‌), ಯಶವಂತಪುರ– ಲಖನೌ (ಸಾಪ್ತಾಹಿಕ ಎಕ್ಸ್‌ಪ್ರೆಸ್‌) ರೈಲುಗಳನ್ನು ಶನಿವಾರ­ದಿಂದ ಆರಂಭಿಸಲಾಯಿತು.ಯಶವಂತಪುರ– ಜಬಲ್‌ಪುರ (ನಂ. 12193/12194) ರೈಲು ಪ್ರತಿ ಶನಿ­ವಾರ ಜಬಲ್‌ಪುರದಿಂದ ಬೆಳಿಗ್ಗೆ 6.45ಕ್ಕೆ ಹೊರಟು ಭಾನುವಾರ ಮಧ್ಯಾಹ್ನ 1.30ಕ್ಕೆ ಯಶವಂತಪುರ ತಲುಪಲಿದೆ. ಭಾನುವಾರ ಮಧ್ಯಾಹ್ನ 3.30ಕ್ಕೆ ಯಶ­ವಂತ­ಪುರ ನಿಲ್ದಾಣದಿಂದ ಹೊರಟು ಸೋಮವಾರ ರಾತ್ರಿ 10.15ಕ್ಕೆ ಜಬಲ್‌ಪುರ ತಲುಪಲಿದೆ.

ಈ ರೈಲು 1,770 ಕಿ.ಮೀ. ದೂರ­ವನ್ನು 30 ಗಂಟೆ 45 ನಿಮಿಷಗಳಲ್ಲಿ ಕ್ರಮಿ­ಸಲಿದೆ. ಒಟ್ಟು 19 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.ಯಶವಂತಪುರ–ಕಾಚಿಗುಡ–ಯಶವಂತಪುರ ಎಕ್ಸ್‌ಪ್ರೆಸ್‌ ರೈಲು (ನಂ. 16569/16570) (ಪ್ರತಿ ಸೋಮ­ವಾರ, ಬುಧವಾರ ಮತ್ತು ಶುಕ್ರವಾರ) ಮಧ್ಯಾಹ್ನ 2.30ಕ್ಕೆ ಯಶವಂತಪು­ರ­ದಿಂದ ಹೊರಟು (ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ) ಬೆಳಿಗ್ಗೆ 3.40ಕ್ಕೆ ಕಾಚಿಗುಡ ತಲುಪಲಿದೆ. ಕಾಚಿ­ಗುಡದಿಂದ (ಪ್ರತಿ ಮಂಗಳ­ವಾರ, ಬುಧ­ವಾರ ಮತ್ತು ಶನಿವಾರ) ಮಧ್ಯಾಹ್ನ 2ಕ್ಕೆ ಹೊರಟು (ಪ್ರತಿ ಬುಧವಾರ, ಶನಿವಾರ ಮತ್ತು ಭಾನುವಾರ) ಬೆಳಿಗ್ಗೆ 3.40ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.ಯಶವಂತಪುರ– ಲಖನೌ ಎಕ್ಸ್‌ಪ್ರೆಸ್‌ ರೈಲು (ನಂ. 22683/22684) ಪ್ರತಿ ಸೋಮವಾರ ರಾತ್ರಿ 11.40ಕ್ಕೆ ಯಶ­ವಂತ­ಪುರದಿಂದ ಹೊರಟು, ಬುಧ­ವಾರ ಸಂಜೆ 6.55ಕ್ಕೆ ಲಖನೌ ತಲುಪ­ಲಿದೆ. ಪ್ರತಿ ಗುರುವಾರ ರಾತ್ರಿ 7.25ಕ್ಕೆ ಲಖನೌದಿಂದ ಹೊರಟು ಶನಿವಾರ ಮಧ್ಯಾಹ್ನ 2ಕ್ಕೆ ಯಶವಂತಪುರ ತಲುಪಲಿದೆ.ಈ ರೈಲು 2,302 ಕಿ.ಮೀ. ದೂರ­ವನ್ನು 44 ಗಂಟೆಗಳಲ್ಲಿ ಕ್ರಮಿಸುತ್ತದೆ. ಒಟ್ಟು 29 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ವಾರದ ಆರು ದಿನ ಮಾತ್ರ ಸಂಚರಿಸುತ್ತಿದ್ದ ಬೆಂಗಳೂರು ಸಿಟಿ–ತುಮ­ಕೂರು–ಬೆಂಗಳೂರು ಸಿಟಿ ಪ್ಯಾಸೆಂಜರ್‌ ರೈಲುಗಳ ಸೇವೆಯನ್ನು ವಾರದ ಏಳೂ ದಿನಗಳಿಗೆ ವಿಸ್ತರಿಸಲಾಗಿದೆ.ನಾಲ್ಕು ರೈಲುಗಳಿಗೆ ಬೆಂಗಳೂರು ಸಿಟಿ ರೈಲು ನಿಲ್ದಾಣ­­ದಲ್ಲಿ ಶನಿವಾರ ರಿಮೋಟ್‌ ಕಂಟ್ರೋಲ್‌ ಮೂಲಕ ಹಸಿರು ನಿಶಾನೆ ತೋರಿಸಿದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.