ಲಘು ಭೂಕಂಪ: ಇಬ್ಬರ ಸಾವು

7

ಲಘು ಭೂಕಂಪ: ಇಬ್ಬರ ಸಾವು

Published:
Updated:

ಮಂಗಾನ್ (ಪಿಟಿಐ): ಸಿಕ್ಕಿಂನ ಉತ್ತರ ಭಾಗದಲ್ಲಿ ಶನಿವಾರ ಸಂಭವಿಸಿದ ಲಘು ಭೂಕಂಪಕ್ಕೆ ಇಬ್ಬರು ಬಲಿಯಾಗಿದ್ದಾರೆ ಎಂದು ತಡವಾಗಿ ಬಂದ ವರದಿಗಳು ಭಾನುವಾರ ತಿಳಿಸಿವೆ.ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 3.2ರಷ್ಟು ಇತ್ತು. ನುಂಗ್ ಗ್ರಾಮದ 85 ವರ್ಷದ ವೃದ್ಧರೊಬ್ಬರು ಭೂಕಂಪವಾದ ಕೂಡಲೇ ಮನೆ ಅಲುಗಾಡಿದ ಅನುಭವವಾಗಿದ್ದರಿಂದ ಗಾಬರಿಗೊಂಡು ಮೆಟ್ಟಿಲು ಇಳಿಯುತ್ತಿದ್ದಾಗ ಕೆಳಕ್ಕೆ ಬಿದ್ದು ಹೃದಯಾಘಾತದಿಂದ ನಿಧನ ಹೊಂದಿದರು.ಲಿಂಗ್ಡೆಮ್ ಬಸ್ತಿ ಎಂಬಲ್ಲಿ 27 ವರ್ಷದ ಸೋನಮ್ ವಿಂಗ್ಯಾಲ್ ಎಂಬಾತ ಸೇತುವೆಯಿಂದ ಬಿದ್ದು ಸತ್ತಿದ್ದಾನೆ. ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರು ಭೂಕಂಪ ಸಂಭವಿಸಿದ ಪ್ರದೇಶಕ್ಕೆ ಭೇಟಿ ನೀಡಿ ಸತ್ತವರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ವಿತರಿಸಿದರು.ಕಳೆದ ತಿಂಗಳು ರಾಜ್ಯದಲ್ಲಿ ಸಂಭವಿಸಿದ 6.8ರಷ್ಟು ತೀವ್ರತೆಯ ಭೂಕಂಪ ಹಲವಾರು ಜನರನ್ನು ಬಲಿ ತೆಗೆದುಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry