ಲಘು ಲಾಠಿ ಪ್ರಹಾರ

7

ಲಘು ಲಾಠಿ ಪ್ರಹಾರ

Published:
Updated:

ಬೆಂಗಳೂರು: ಡಿ.ಕೆ. ಶಿವಕುಮಾರ್‌ ಮತ್ತು ರೋಷನ್‌ ಬೇಗ್‌ ಪ್ರಮಾಣ ವಚನ ಸ್ವೀಕಾರ ಸಮಾ­ರಂಭ ವೀಕ್ಷಿಸಲು ರಾಜಭವನಕ್ಕೆ ಬಂದಿದ್ದ ಬೆಂಬಲಿಗರನ್ನು ನಿಯಂತ್ರಿ­ಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು.ಆಹ್ವಾನ ಇದ್ದವರಿಗೆ ರಾಜಭವನದ ಒಳಗೆ ಪ್ರವೇಶ ಕಲ್ಪಿಸ­ಲಾಗಿತ್ತು. ಆದರೆ, ರಾಜಭವನ ರಸ್ತೆ­ಯಲ್ಲಿ ಇಬ್ಬರ ಬೆಂಬ­ಲಿ­ಗರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಘೋಷಣೆ­ ಹಾಕಿ ಡೊಳ್ಳು ಬಾರಿಸಿದ ಬೆಂಬಲಿಗರು ಪೊಲೀಸ್‌ ಬಂದೋಬಸ್ತ್‌ ಮುರಿದು ಒಳನುಗ್ಗಲು ಯತ್ನಿಸಿದರು. ಆಗ ಪೊಲೀಸರು ಲಾಠಿ ಬೀಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry