ಶುಕ್ರವಾರ, ಏಪ್ರಿಲ್ 23, 2021
27 °C

ಲಜ್ಜೆಗೆಟ್ಟ ರಾಜ್ಯ ರಾಜಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದ ಆಡಳಿತಾರೂಢ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಟ್ಟಂಗಿತನ ಹಾಗೂ ಗುಂಪುಗಾರಿಕೆಯು ಲಜ್ಜೆಗೆಟ್ಟ ರಾಜಕೀಯಕ್ಕೆ ನಿದರ್ಶನದಂತಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಬಣದ ಅಧಿಕಾರದಾಹ, ಕುತಂತ್ರ ಹಾಗೂ ಅಸಹ್ಯಕರವಾದ ಜಾತಿ ರಾಜಕೀಯ ಮತ್ತು ಗುಂಪುಗಾರಿಕೆಯಿಂದಾಗಿ ಸರ್ಕಾರ ಅಸ್ಥಿರಗೊಳ್ಳುವಂತಾಗಿದ್ದು, ನಿರಾಡಳಿತದ ಅಪಾಯದಿಂದ ರಾಜ್ಯದ ನಾಗರಿಕರು ತತ್ತರಿಸುವಂತಾಗಿದೆ.ಭ್ರಷ್ಟಾಚಾರದ ಕಳಂಕಗಳ ಕಿಂಚಿತ್ ಅವಮಾನವೂ ಇಲ್ಲದಂತೆ, ಈ ಗುಂಪುಗಳು ಭಟ್ಟಂಗಿತನದಲ್ಲಿ ಮುಳುಗಿರುವುದು ನಿರ್ಲಜ್ಜತೆಯ ಪರಾಕಾಷ್ಠೆಯಾಗಿದೆ. ಬೇಸಿಗೆಯಲ್ಲಿ ಭೀಕರ ಬರದಿಂದ ರಾಜ್ಯದ ಜನ ತತ್ತರಿಸಿಹೋದರು.  ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗಾಗಿ ಪರದಾಡಿಬಿಟ್ಟರು. ವಿದ್ಯುತ್ ಅಭಾವವೂ ಭೀಕರವಾಗಿಯೇ ಕಾಡಿತು.  ಇನ್ನೇನು ಮುಂಗಾರು ಬಂತೆಂದು ಜನತೆ ಸ್ವಲ್ಪ ನಿರಾಳವಾಗುವ ಈಗಿನ ಸಂದರ್ಭದಲ್ಲೇ, ಮುಂಗಾರು ಮಳೆಯೂ ಕೈಕೊಡುತ್ತಿದೆ.ಜನತೆ ಅನುಭವಿಸುತ್ತಿರುವ ನಾನಾ ಬಗೆಯ ಯಾತನೆಗಳು ಯಥಾಸ್ಥಿತಿಯಲ್ಲೇ ಮುಂದುವರಿಯುವ ಅಪಾಯ ಎದುರಾಗುತ್ತಿದೆ. ಜನಸಾಮಾನ್ಯರ ಕೂಗು ಅರಣ್ಯರೋದನವಾಗುತ್ತಿದೆ.ಪರಿಸ್ಥಿತಿಯ ಲಾಭ ಪಡೆದ ಆಡಳಿತಶಾಹಿಯು ನಿರಂಕುಶವಾಗುತ್ತಿದೆ. ಇಂತಹದೊಂದು ಸಂಕಷ್ಟದ ಸಂದರ್ಭದಲ್ಲಿ ಜನಪರವಾಗಿ ಸಮರೋಪಾದಿಯಲ್ಲಿ ಕ್ರಿಯಾಶೀಲ ವಾಗಬೇಕಾಗಿದ್ದ ಆಡಳಿತಾರೂಢ ಬಿಜೆಪಿಯವರು ಅತ್ಯಂತ ಬೇಜವಾಬ್ದಾರಿಯಿಂದ `ಕೊಳಕು ರಾಜಕೀಯ~ ದಲ್ಲಿ ಮುಳುಗಿರುವುದು ಅಕ್ಷಮ್ಯ ಹಾಗೂ ಅಮಾನವೀಯವಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.