ಸೋಮವಾರ, ಜನವರಿ 27, 2020
25 °C

ಲಡಾಖ್‌: ಮತ್ತೆ ಗಡಿ ಉಲ್ಲಂಘಿಸಿದ ಚೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸುಮಾರು 20 ಚೀನಿ ಯೋಧರು ಕಳೆದ ವಾರ ಗಡಿ ವಾಸ್ತ­ವ ರೇಖೆ (ಎಲ್‌ಎಸಿ) ಬಳಿ ಭಾರ­ತದ ಭೂಪ್ರದೇಶ ಪ್ರವೇಶಿಸಿ, ಲಡಾ­ಖ್‌ನ ಚೆಪ್ಜಿ ಎಂಬಲ್ಲಿ ಡೇರೆಗಳನ್ನು ಹಾಕಿದ್ದಾಗಿ ಮೂಲಗಳು ಭಾನು­­ವಾರ ತಿಳಿಸಿವೆ. ಚೀನಾದ ಪೀಪಲ್ಸ್ ಲಿಬರೇಷನ್‌ ಆರ್ಮಿಯ (ಪಿಎಲ್‌ಎ) ಸುಮಾರು 20ರಿಂದ 22 ಯೋಧರು 8ರಿಂದ 10 ಟೆಂಟ್‌ಗಳನ್ನು ಹಾಕಿದ್ದರು.

ಆದರೆ ಈಗಲೂ ಚೀನಿ ಪಡೆ ಅದೇ ಪ್ರದೇಶ­ದಲ್ಲಿ ಇದೆಯೇ ಅಥವಾ ಟೆಂಟ್‌­ಗಳನ್ನು ತೆರವು ಮಾಡಿದೆಯೇ ಎಂಬುದು ತಿಳಿ­ದಿಲ್ಲ ಎಂದು ಈ ಮೂಲ­ಗಳು ಹೇಳಿವೆ.  ಆದರೆ ಇಂತಹ ಯಾವುದೇ ಘಟನೆ ನಡೆದಿ­ರು­ವುದನ್ನು ಸೇನಾ ಪ್ರಧಾನ ಕಚೇ­ರಿ­ಯು ಅಲ್ಲಗಳೆದಿದೆ. ಈ ಮಧ್ಯೆ, ಭಾರ­ತವು ಶನಿ­ವಾರ ಚೀನಾದೊಂದಿಗೆ ಸೇನಾ­ಧಿಕಾರಿ­ಗಳ ಸಭೆ ನಡೆಸಿದೆ. ಚೆಪ್ಜಿಯು ಚುಮಾರ್‌ ಪ್ರದೇಶಕ್ಕೆ ಹತ್ತಿರದಲ್ಲಿದ್ದು, ಇಲ್ಲಿ ಕಳೆದ ಒಂದು ವರ್ಷದಲ್ಲಿ ಚೀನಾ­ದಿಂದ ಅನೇಕ ಬಾರಿ ಗಡಿ ಉಲ್ಲಂಘನೆ ನಡೆದಿರುವುದನ್ನು ಸ್ಮರಿಸಬಹುದು.

ಪ್ರತಿಕ್ರಿಯಿಸಿ (+)