ಲತಾ ಮಂಗೇಶ್ಕರ್‌ಗೆ ಭೀಮಸೇನ ಪ್ರಶಸ್ತಿ

7

ಲತಾ ಮಂಗೇಶ್ಕರ್‌ಗೆ ಭೀಮಸೇನ ಪ್ರಶಸ್ತಿ

Published:
Updated:

ಪುಣೆ (ಪಿಟಿಐ): ಭಾರತರತ್ನ ಪಂಡಿತ್ ಭೀಮಸೇನ ಜೋಷಿ ಅವರ ಸ್ಮರಣಾರ್ಥ ನೀಡುವ ’ಸ್ವರಭಾಸ್ಕರ’ ಪ್ರಶಸ್ತಿಯನ್ನು  ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಕಥಕ್ ನೃತ್ಯಗಾರ್ತಿ ಸಿತಾರ ದೇವಿ ಅವರು ಭಾನುವಾರ ಪ್ರದಾನ ಮಾಡಿದರು.

ಪುಣೆ ಮಹಾನಗರ ಪಾಲಿಕೆಯು ಭೀಮಸೇನ ಜೋಷಿ ನಿಧನರಾದ ತಕ್ಷಣ ಇಂತಹದ್ದೊಂದು ಪ್ರಶಸ್ತಿ ನೀಡಲಾಗುವುದೆಂದು ಪ್ರಕಟಿಸಿತ್ತು. ಈ ಪ್ರಶಸ್ತಿಯ ಜತೆಗೆ ಒಂದು ಲಕ್ಷದ ಹನ್ನೊಂದು ಸಾವಿರ ರೂಪಾಯಿಗಳ ನಗದನ್ನೂ ನೀಡಲಾಯಿತು.  

 

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ಪುಣೆ ಮೇಯರ್ ಮೋಹನ್ ಸಿಂಗ್ ರಾಜಪಾಲ್, ರಾಜ್ಯ ಆರಣ್ಯ ಸಚಿವ ಪಟನ್‌ಗೋರ್ ಕದಂ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry