ಲಯನ್ಸ್ ಪದಗ್ರಹಣ ಸಮಾರಂಭ

ಶುಕ್ರವಾರ, ಜೂಲೈ 19, 2019
28 °C

ಲಯನ್ಸ್ ಪದಗ್ರಹಣ ಸಮಾರಂಭ

Published:
Updated:

ಬೆಂಗಳೂರು: `ಲಯನ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಜಿಲ್ಲೆ 317 `ಎಫ್' ರ ವಾರ್ಷಿಕ ಪದವಿ ಸ್ವೀಕಾರ ಸಮಾರಂಭವನ್ನು ಜುಲೈ 21ರಂದು ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ' ಎಂದು 317 `ಎಫ್' ರ ಜಿಲ್ಲಾ ಗವರ್ನರ್ ಆರ್. ಕುಮಾರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಬಡತನ ರೇಖೆಗಿಂತ ಕೆಳಗಿರುವ 106 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.ತಾಂತ್ರಿಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 75 ವಿದ್ಯಾರ್ಥಿಗಳಿಗೆ ರೂ.10 ಸಾವಿರ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗುವುದು. 65 ಮಂದಿ ಅಂಗವಿಕಲರಿಗೆ ಕೃತಕ ಕಾಲು ವಿತರಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry