ಲಲಿತಕಲೆಗಳ ಸ್ಥಾನಿಕ ಶಿಕ್ಷಣ ಪದವಿ

7

ಲಲಿತಕಲೆಗಳ ಸ್ಥಾನಿಕ ಶಿಕ್ಷಣ ಪದವಿ

Published:
Updated:

ಬೆಂಗಳೂರು: ಯಾವುದೇ ವಿದ್ಯಾರ್ಹತೆ, ವಯೋಮಿತಿ ನಿರ್ಬಂಧವಿಲ್ಲದೆ `ಸ್ಥಾನಿಕ ಶಿಕ್ಷಣ~ ಎಂಬ ಹೆಸರಿನಲ್ಲಿ ಆಸಕ್ತರಿಗೆ ಲಲಿತಕಲೆಗಳ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮೈಸೂರಿನ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿ, ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಯೋಗದಲ್ಲಿ (ಕೆಎಸ್‌ಒಯು) ಆರಂಭಿಸಿದೆ.`ಸ್ಥಾನಿಕ ಶಿಕ್ಷಣದ ಅಡಿ ಆಸಕ್ತರು ತಾವಿರುವ ಸ್ಥಳದಲ್ಲೇ, ತಮಗೆ ಅನುಕೂಲವಾದ ಸಮಯದಲ್ಲಿ ಸಮೀಪದ ಸ್ಥಾನಿಕ ಪಾಠಶಾಲೆಗೆ ತೆರಳಿ ಲಲಿತಕಲೆಗಳ ಅಧ್ಯಯನ ನಡೆಸಬಹುದು. ಹವ್ಯಾಸಿ ಕಲಾವಿದರು, ಗೃಹಿಣಿಯರು, ನೌಕರರು, ದಿನನಿತ್ಯ ತರಗತಿಗೆ ಹಾಜರಾಗಲು ಸಾಧ್ಯವಾಗದಿರುವವರನ್ನು ಗಮನದಲ್ಲಿಟ್ಟುಕೊಂಡು ಇದನ್ನು ಆರಂಭಿಸಲಾಗಿದೆ~ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.ಇದು ಮುಖಾಮುಖಿ ಶಿಕ್ಷಣ. ವಯೋಮಿತಿ, ವಿದ್ಯಾರ್ಹತೆಯ ನಿರ್ಬಂಧವಿಲ್ಲ. ವಿದ್ಯಾರ್ಥಿಯು ತನ್ನ ಬಿಡುವಿನ ವೇಳೆಯಲ್ಲಿ ತರಗತಿಗೆ ಹಾಜರಾಗಬಹುದು. ದೃಶ್ಯಕಲೆ, ಸಂಗೀತ ಮತ್ತು ನಾಟ್ಯ ಪ್ರಕಾರಗಳಲ್ಲಿ ವಿವಿಧ ಪದವಿ ಶಿಕ್ಷಣ ಲಭ್ಯವಿದೆ ಎಂದು ಅಕಾಡೆಮಿ ಹೇಳಿದೆ.ಅರ್ಜಿ ಸಲ್ಲಿಸಲು ಇದೇ 15 ಕಡೆಯ ದಿನಾಂಕ. ಹೆಚ್ಚಿನ ಮಾಹಿತಿಗೆ ಅಕಾಡೆಮಿಯ ವೆಬ್‌ಸೈಟ್‌ಗೆ (www. salamysore.com)  ಭೇಟಿ ನೀಡಬಹುದು.  99806 57709, 0821-2484849 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry