ಲಲಿತಾ ಕುಮಾರಮಂಗಲಂ ಮಹಿಳಾ ಆಯೋಗದ ಅಧ್ಯಕ್ಷೆ

7

ಲಲಿತಾ ಕುಮಾರಮಂಗಲಂ ಮಹಿಳಾ ಆಯೋಗದ ಅಧ್ಯಕ್ಷೆ

Published:
Updated:

ನವದೆಹಲಿ (ಪಿಟಿಐ): ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯೆ ಲಲಿತಾ ಕುಮಾರಮಂಗಲಂ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ. ರಾಜಕೀಯ ಹಿನ್ನೆಲೆ ಇರುವವರು ಮಹಿಳಾ ಆಯೋಗದಲ್ಲಿ ಕಾರ್ಯ­ನಿರ್ವಹಿಸುವುದರ ವಿರುದ್ಧ  ಕೆಲದಿನ­ಗಳ ಹಿಂದೆಯಷ್ಟೇ ತಕರಾರು ಎತ್ತಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮೇನಕಾ ಗಾಂಧಿ ಇದೀಗ ಕುಮಾರಮಂಗಲಂ ನೇಮಕವನ್ನು ಸ್ವಾಗತಿಸಿದ್ದಾರೆ.ನೂತನ ಅಧ್ಯಕ್ಷರನ್ನು ಪರಿಚಯಿಸಿದ ಸಚಿವೆ, ‘ತಮಿಳು­ನಾಡು ಮೂಲದ ಲಲಿತಾ ಕುಮಾರಮಂಗಲಂ ‘ಪ್ರಕೃತಿ’ ಎಂಬ ಸರ್ಕಾರೇತರ ಸಂಸ್ಥೆ­ಯನ್ನು ನಡೆಸುತ್ತಿದ್ದಾರೆ. ಆಕೆ ಮೋಹನ್‌ ಕುಮಾರಮಂಗಲಂ ಅವರ ಮಗಳು’ ಎಂದು ಮಾಹಿತಿ ನೀಡಿದರು.ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸಮನಾದ ಅಧಿಕಾರ ನೀಡಲು ತಮ್ಮ ಇಲಾಖೆ ಬಯಸು­ತ್ತದೆ. ಹಾಗಾದರೆ ಮಹಿಳೆಯರ ಮೇಲಿನ ಹಿಂಸೆ ಮತ್ತು ದೌರ್ಜನ್ಯ ಪ್ರಕರಣ­ಗಳನ್ನು ನಿಭಾಯಿಸಲು ಆಯೋಗಕ್ಕೆ ಅವಕಾಶ ಸಿಗುತ್ತದೆ ಎಂದರು. ದುಡಿಯುವ ಸ್ಥಳದಲ್ಲಿ ಮಹಿಳೆ­ಯರ ಮೇಲಾಗುವ ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ­ದಂತಹ ಪ್ರಕರಣ­ಗಳಲ್ಲಿ ವಿಚಾರಣೆ, ತನಿಖೆ, ಜಪ್ತಿ ಮಾಡುವ  ಅಧಿಕಾರವನ್ನು ಆಯೋಗಕ್ಕೆ ನೀಡಬೇಕು ಎಂಬ ಪ್ರಸ್ತಾವನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಂದಿದೆ ಎಂದು ಮೇನಕಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry