ಲಲಿತ್ ಬಾಬುಗೆ ಚೆಸ್ ಪ್ರಶಸ್ತಿ

7

ಲಲಿತ್ ಬಾಬುಗೆ ಚೆಸ್ ಪ್ರಶಸ್ತಿ

Published:
Updated:

ಚೆನ್ನೈ (ಪಿಟಿಐ): ಗ್ರ್ಯಾಂಡ್‌ಮಾಸ್ಟರ್‌ಗಳಾದ ಎಂ.ಆರ್.ಲಲಿತ್ ಬಾಬು ಮತ್ತು ಸೆರ್ಗೆಯ್ ತಿವಿಯಾಕೊವ್ ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಚೆಸ್ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತು ಮುಗಿದಾಗ ಒಟ್ಟು 9.5 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಭಾರತದ ಲಲಿತ್‌ಬಾಬು ಅವರು ಕಾಮನ್‌ವೆಲ್ತ್ ಚಾಂಪಿಯನ್ ಪ್ರಶಸ್ತಿಯೊಂದಿಗೆ 1,25,000 ರೂಪಾಯಿ ನಗದು ಬಹುಮಾನ ಪಡೆದುಕೊಂಡರು. ಅಂತಿಮ ಸುತ್ತಿನಲ್ಲಿ ಲಲಿತ್‌ಬಾಬು ಅವರು ಪಿ.ಕಾರ್ತಿಕೇಯನ್ ಅವರನ್ನು ಸೋಲಿಸಿದರು. ನೆದರ್‌ಲೆಂಡ್ಸ್‌ನ ತಿವಿಯಾಕೊವ್ ಇಂಟರ್‌ನ್ಯಾಷನಲ್ ಕಾಮನ್‌ವೆಲ್ತ್ ಚಾಂಪಿಯನ್ ಪ್ರಶಸ್ತಿ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry