ಗುರುವಾರ , ಜೂನ್ 24, 2021
25 °C

ಲಲಿತ್ ಮೋದಿಗೆ 73 ಲಕ್ಷ ರೂ. ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಮಾನಹಾನಿ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರ ಮೇಲೆ ಲಂಡನ್ ಹೈಕೋರ್ಟ್ 73 ಲಕ್ಷ ರೂಪಾಯಿ ದಂಡ ವಿಧಿಸಿದೆ.2008ರಲ್ಲಿ ನಡೆದ ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್)ಟೂರ್ನಿ ವೇಳೆ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು ಎಂದು ಮೋದಿ ಆರೋಪ ಮಾಡಿದ್ದ ಕಾರಣ ನ್ಯೂಜಿಲೆಂಡ್‌ನ ಆಲ್‌ರೌಂಡರ್ ಕ್ರಿಸ್ ಕೇರ್ನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು.ಆದರೆ ನ್ಯಾಯಾಲಯ ಈ ಆದೇಶ ನೀಡಿದಾಗ ಕೇರ್ನ್ಸ್ ಹಾಗೂ ಮೋದಿ ಉಪಸ್ಥಿತರಿರಲಿಲ್ಲ. ಮೋದಿ 28 ದಿನಗಳೊಳಗೆ ಈ ದಂಡದ ಅರ್ಧದಷ್ಟು ಹಣವನ್ನು ಕೇರ್ನ್ಸ್‌ಗೆ ನೀಡಬೇಕಾಗಿದೆ. ಈ ತೀರ್ಪಿನ ವಿರುದ್ಧ ಏಪ್ರಿಲ್ 20ರೊಳಗೆ ಮೋದಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.ಬಿಸಿಸಿಐಗೆ ಪರ್ಯಾಯವಾಗಿ ಝೀ ಸಮೂಹ ಸ್ಥಾಪಿಸಿದ್ದ ಐಸಿಎಲ್ ಟೂರ್ನಿಯಲ್ಲಿ ಕೇರ್ನ್ಸ್ ಚಂಡೀಗಡ ಲಯನ್ಸ್ ತಂಡದ ನಾಯಕರಾಗಿದ್ದರು. ಆದರೆ ಹಿಮ್ಮಡಿ ನೋವಿದ್ದರೂ ಅದನ್ನು ತಂಡದ ಆಡಳಿತಕ್ಕೆ ತಿಳಿಸಿರಲಿಲ್ಲ. ಹಾಗಾಗಿ ಅವರ ಒಪ್ಪಂದ ರದ್ದುಗೊಳಿಸಲಾಗಿತ್ತು.ಬಳಿಕ ಅವರು ಐಪಿಎಲ್‌ನಲ್ಲಿ ಆಡಲು ಆಸಕ್ತಿ ತೋರಿಸಿದ್ದರು. ಆದರೆ `ಕೇರ್ನ್ಸ್ ಮೋಸದಾಟದಲ್ಲಿ ಪಾಲ್ಗೊಂಡಿದ್ದಾರೆ. ಹಾಗಾಗಿ ಅವರನ್ನು ಐಪಿಎಲ್ ಹರಾಜು ಪ್ರಕ್ರಿಯೆಯಿಂದ ಕೈಬಿಡಲಾಗಿದೆ~ ಎಂದು 2010ರಲ್ಲಿ ಮೋದಿ ಟ್ವಿಟರ್ ಮೂಲಕ ಆರೋಪ ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.