ಲಲಿತ ಗಾನಂ !

7

ಲಲಿತ ಗಾನಂ !

Published:
Updated:

ಫಿಲ್ಮಾಲಯ ಸಂಪ್ರೀತೆ

ಲಾಲಿತ್ಯ ಸಂಪೂರ್ಣೆ

ಓ ಲಲಿತ ಜೀಲಲಿತ ಲಾಲಿಲಾಲಿ

ನೂರು ಚಿನ್ನದ ಹಾರ

ಕೋಟಿ ಕಾಂಚನ ಭಾರ

ನಿನ್ನ ಸಾಧನೆಯಾಯ್ತೆ ಬಂಡಿಗಾಲಿ

ಕಾಂಚಾಣ ಕಾಶ್ಮೀರೆ

ಕಾಂಚನದ ಕೌಮಾರೆ

ಅಧಿಕಾರ ಶಾರ್ದೂಲೆ ಉಘೇಉಘೇ

ನೂರು ಸಾಸಿರ ಸೀರೆ

ಕಡಲ ಕಾಂಚನ ನೀರೆ

ಲಕ್ಷಕೋಟಿಯ ಧೀರೆ ಉಘೇಉಘೇ

ಬಡವರಾ ಜೇಲಿನಲಿ

ದೊಡ್ಡವರು ನೀವ್ಯಾಕೆ

ನಮ್ಮ ರೊಟ್ಟಿಯ ನಡುವೆ

ನಿಮಗೆ ಪಾಲೇ ?

ದಿಲ್ಲಿಗ್ಹೋದರು ನೀವೆ

ಹಳ್ಳಿಗ್ಹೋದರು ನೀವೆ

ಜೇಲಿಗ್ಹೋದರು ನೀವೆ

ಮುಂದೆ ಹೇಗೆ ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry