ಲವ್ ಸಾಂಗ್

7

ಲವ್ ಸಾಂಗ್

Published:
Updated:
ಲವ್ ಸಾಂಗ್

`ಇಂದು ನಾಯಕಿಯರು ತುಂಡುಡುಗೆ ತೊಟ್ಟು ಬಂದಿರುವುದಕ್ಕೆ ಕೆ.ಮಂಜು ಕಾರಣನಾ?~ ಎನ್ನುತ್ತಾ ತುಂಟುನಗೆ ನಕ್ಕರು ನಟಿ ತಾರಾ.`ಐ ಯಾಮ್ ಇನ್ ಲವ್~ ಚಿತ್ರದ ಸೀಡಿ ಬಿಡುಗಡೆ ಸಮಾರಂಭಕ್ಕೆ ತುಂಡುಡುಗೆ ತೊಟ್ಟು ಬಂದಿದ್ದ ನಾಯಕಿಯರನ್ನು ನೋಡಿದಾಕ್ಷಣ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧಾ ಅವರ ಬಾಯಿಂದ ಬಂದ ಮಾತಿದು.ಬಳಿಕ `ಪತ್ರಿಕಾಗೋಷ್ಠಿಗಳಿಗೆ ಇಂಥ ಉಡುಪುಗಳ ಅಗತ್ಯವಿಲ್ಲ~ ಎನ್ನುತ್ತಾ ತಾರಾ ಚಿತ್ರದ ಸೀಡಿಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅವರಿಗೆ ನಿರ್ಮಾಪಕ ಕೆ.ಮಂಜು ಸಾಥ್ ನೀಡಿದರು.ಪತ್ರಕರ್ತ ನಂದಕುಮಾರ್ ನಿರ್ದೇಶಿಸಿರುವ `ಐ ಯಾಮ್ ಇನ್ ಲವ್~ ಚಿತ್ರ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಹಾಡುಗಳನ್ನು ಕೇಳಿರುವ ನಿರ್ದೇಶಕರು ಗೆಲುವಿನ ವಾಸನೆ ಸಿಕ್ಕಿದ ಖುಷಿಯಲ್ಲಿದ್ದಾರೆ.

`ಚಿತ್ರದ ಅಂತ್ಯದಲ್ಲಿ ಯಾರೂ ಊಹಿಸಲಾಗದಂಥ ತಿರುವನ್ನು ಇಡಲಾಗಿದೆ~ ಎಂದು ಅವರು ಕುತೂಹಲ ಕಾಯ್ದುಕೊಂಡರು. ಸಂಗೀತ ನಿರ್ದೇಶಕ ಸಾಯಿ ಕಾರ್ತಿಕ್ ಚಿತ್ರದ ಐದು ಹಾಡುಗಳಿಗೂ ವಿನೂತನ ರಾಗಗಳನ್ನು ಜೋಡಿಸಿರುವುದಾಗಿ ಹೇಳಿದರು. ಹಾಗೆಯೇ ಗಾಯಕಿ ಲಕ್ಷ್ಮಿ ಮನಮೋಹನ್ ಅವರೊಡಗೂಡಿ ಚಿತ್ರದ ಹಾಡಿನ ಬಿಟ್‌ಗಳನ್ನು ಹಾಡಿ ತೋರಿಸಿದರು.ನೀಲಿ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ನಾಯಕಿ ಕಾವ್ಯಾ ಶೆಟ್ಟಿಗೆ ಸಂಗೀತ ಎನ್ನುವುದು ಸಿನಿಮಾದ ಉಸಿರು ಎನಿಸಿದೆ. ತಾವು ನಟಿಸಿದ ಮೊದಲ ಚಿತ್ರದ ಹಾಡುಗಳು ಚೆನ್ನಾಗಿ ಬಂದಿರುವ ಬಗ್ಗೆ ಅವರು ಖುಷಿಯಾಗಿದ್ದರು.

 

ನಿರ್ಮಾಪಕಿ ಲಲಿತಾ ಚನ್ನರೆಡ್ಡಿ ಅವರಿಗೂ ಚಿತ್ರತಂಡದ ಕೆಲಸ ಇಷ್ಟವಾಗಿದೆ. ಸಮಾರಂಭದಲ್ಲಿ ನಾಯಕ ಮಹೇಶ್, ಸ್ನೇಹಾ, ಹಾಡುಗಳನ್ನು ಬರೆದಿರುವ ಗೌಸ್‌ಪೀರ್ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry