ಲಷ್ಕರ್ ಉಗ್ರರ ಹತ್ಯೆ

7

ಲಷ್ಕರ್ ಉಗ್ರರ ಹತ್ಯೆ

Published:
Updated:

ಶ್ರೀನಗರ (ಪಿಟಿಐ): ದಕ್ಷಿಣ ಕಾಶ್ಮೀರದ ಪುಲವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಉಗ್ರರ ನಡುವೆ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ.ಪುಲವಾಮಾ ಜಿಲ್ಲೆಯ ಅದೋರಾ ಗ್ರಾಮದಲ್ಲಿ ಉಗ್ರರೊಂದಿಗೆ ನಡೆದ ಈ ಚಕಮಕಿಯಲ್ಲಿ ಭದ್ರತಾ ಪಡೆ ಯೋಧರೊಂದಿಗೆ ಸ್ಥಳೀಯ ಪೊಲೀಸರು ಕೂಡ ಕೈಜೋಡಿಸಿದ್ದರು.ರಾತ್ರಿಯಿಡೀ ನಡೆದ ಈ ಗುಂಡಿನ ಕಾಳಗದಲ್ಲಿ ಹತ್ಯೆಯಾದ ಇಬ್ಬರನ್ನು ಮುಜಾಫರ್ ಅಹ್ಮದ್ ಶೇಖ್ ಅಲಿಯಾಸ್ ಚೋಟು ಮತ್ತು ಆಶಿಕ್ ಹುಸೇನ್ ಶಹಾ ಎಂದು ಗುರುತಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry