ಲಾಂಛನ ಸ್ಟಂಪಿಗೆ ಭಾರಿ ಬೇಡಿಕೆ

7

ಲಾಂಛನ ಸ್ಟಂಪಿಗೆ ಭಾರಿ ಬೇಡಿಕೆ

Published:
Updated:

ನವದೆಹಲಿ (ಐಎಎನ್‌ಎಸ್): ವಿಶ್ವಕಪ್ ಕ್ರಿಕೆಟ್ ಉತ್ಸವಮೂರ್ತಿ ‘ಸ್ಟಂಪಿ’ಗೆ ಭಾರಿ ಬೇಡಿಕೆ. ಎಲ್ಲರೂ ಮುದ್ದು ಮುಖದ ಕ್ರಿಕೆಟ್ ಪ್ರಿಯ ಆನೆಯನ್ನು ತಮ್ಮ ಮನೆಯ ಅಲಂಕಾರವಾಗಿಸಿಕೊಳ್ಳಲು ಉತ್ಸಾಹಿತರಾಗಿದ್ದಾರೆ.‘ಸ್ಟಂಪಿ’ ಇರುವಂಥ ವಿಶ್ವಕಪ್ ಸ್ಮರಣಿಕೆಗಳಿಗಾಗಿ ಅನೇಕ ಮಾರಾಟಗಾರರಿಂದ ನಿತ್ಯ ಬೇಡಿಕೆ ಹೆಚ್ಚುತ್ತಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯಿಂದ ಸ್ಮರಣಿಕೆಗಳ ಉತ್ಪಾದನೆಯ ಹಕ್ಕು ಪಡೆದಿರುವ ಕಂಪೆನಿಯವರು ಸಂಭ್ರಮದಲ್ಲಿದ್ದಾರೆ. ವಿಶ್ವಕಪ್ ಮುಗಿಯುವ ಹೊತ್ತಿಗೆ ಎಲ್ಲಾ ಸ್ಟಾಕ್ ಖಾಲಿ ಆಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ.‘ಭಾರತದ ಮಾರುಕಟ್ಟೆಗಾಗಿ ಮಾತ್ರ ನಾವು 1,60,000 ಸ್ಟಂಪಿ ಗೊಂಬೆಗಳನ್ನು ತಯಾರಿಸಿದ್ದೇವೆ. ಅವುಗಳನ್ನು ಇಲ್ಲಿಯಾ ಮಾರಾಟ ಮಾಡುವುದು ನಮ್ಮ ಗುರಿಯಾಗಿದೆ. ಆ ಗುರಿ ಮುಟ್ಟುವುದು ಕಷ್ಟವೇನು ಆಗುವುದಿಲ್ಲ ಎಂದು ಇಲ್ಲಿಯವರೆಗೆ ಕ್ರಿಕೆಟ್ ಪ್ರೇಮಿಗಳು ತೋರಿರುವ ಪ್ರತಿಕ್ರಿಯೆಯಿಂದ ವ್ಯಕ್ತವಾಗಿದೆ’ ಎಂದು ಸಿಂಬಾ ಟಾಯ್ ಇಂಡಿಯಾ ಖಾಸಗಿ ನಿಯಮಿತ ಸಂಸ್ಥೆ ವ್ಯಾಪಾರ ವಿಭಾಗದ ಮುಖ್ಯಸ್ಥ ಪ್ರದೀಪ್ ಪರ್ಮಾರ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.ಈಗಾಗಲೇ ಕಂಪೆನಿಯು ಐವತ್ತು ಸಾವಿರ ‘ಸ್ಟಂಪಿ’ ಟಾಯ್‌ಗಳನ್ನು ಮಾರಾಟ ಮಾಡಿದೆ. ಆಕರ್ಷಕ ಮುಖಭಾವದ ಸ್ಟಂಪಿಯು ಚೆಂಡು ಹಾಗೂ ಬ್ಯಾಟ್ ಹಿಡಿದಿದ್ದು ಎಲ್ಲರನ್ನೂ ಆಕರ್ಷಿಸುತ್ತಿದೆ. ಸಿಂಬಾ ಕಂಪೆನಿಯು ಐಸಿಸಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು 2010ರ ಆದಿಯಲ್ಲಿ. ಆದರೆ ಸ್ಟಂಪಿಯನ್ನು ತಯಾರಿಸುವ ಕೆಲಸ ಆರಂಭಿಸಿದ್ದು ಇದೇ ವರ್ಷ. ಆದರೂ ವಿಶ್ವಕಪ್‌ನಲ್ಲಿ ಆಡುವ ಎಲ್ಲ ದೇಶಗಳ ಬೇಡಿಕೆಯನ್ನು ಪೂರೈಸುವಷ್ಟು ಸ್ಟಂಪಿ ಗೊಂಬೆಗಳನ್ನು ಸಿದ್ಧಪಡಿಸಿದ್ದಾಗಿ ಪ್ರದೀಪ್ ಹೇಳಿದ್ದಾರೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry