ಲಾಗಿನ್ : ಇಂಟರ್‌ನೆಟ್ ಬಳಕೆ: ಅಪಾಯಕಾರಿ

7

ಲಾಗಿನ್ : ಇಂಟರ್‌ನೆಟ್ ಬಳಕೆ: ಅಪಾಯಕಾರಿ

Published:
Updated:

ಇಂಟರ್‌ನೆಟ್‌ನ ಅತಿಯಾದ ಬಳಕೆ ಮತ್ತು ಅಂತರ್‌ಜಾಲವನ್ನು ಬಳಸದೇ ಇರುವುದರಿಂದಲೂ ಖಿನ್ನತೆ ಸೇರಿದಂತೆ ಹಲವಾರು ಬಗೆಯ ಆರೋಗ್ಯ ಸಮಸ್ಯೆಹದಿಹರೆಯದವರಲ್ಲಿ ಕಂಡು ಬರುತ್ತವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.ಇಂಟರ್‌ನೆಟ್‌ನ ಅತಿಯಾದ ಬಳಕೆಯು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಈ ಹಿಂದಿನ ಅಧ್ಯಯನಗಳು ತಿಳಿಸಿದ್ದವು. ಈಗ ಸ್ವಿಟ್ಜರ್‌ಲೆಂಡ್‌ನ ಸಂಸ್ಥೆಯೊಂದು ನಡೆಸಿದ ಹೊಸ ಅಧ್ಯಯನವು, ಇಂಟರ್‌ನೆಟ್ ಬಳಸದಿರುವುದೂ ಯುವ ಜನತೆಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ತೀರ್ಮಾನಕ್ಕೆ ಬಂದಿದೆ.ಮಕ್ಕಳು ಸೀಮಿತ ಪ್ರಮಾಣದಲ್ಲಿ ಇಂಟರ್‌ನೆಟ್ ಬಳಸುವುದನ್ನು ಒಪ್ಪಿಕೊಳ್ಳಬೇಕು  ಮತ್ತು ಇಂಟರ್‌ನೆಟ್ ಅನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡುವ ಬಗ್ಗೆ ಕಿರಿಯರಿಗೆ ಮಾರ್ಗದರ್ಶನ  ಮಾಡಬೇಕು ಎಂದೂ ಅಧ್ಯಯನಕಾರರು ಪಾಲಕರಿಗೆ ಕಿವಿ ಮಾತು ಹೇಳಿದ್ದಾರೆ.ಹದಿ ಹರೆಯದ ಮಕ್ಕಳಿಗೆ ಇಂಟರ್‌ನೆಟ್ ಬಳಕೆ ಬಗ್ಗೆ  ಮತ್ತು ಇಂಟರ್‌ನೆಟ್‌ನ ಪ್ರಯೋಜನಗಳ ಬಗ್ಗೆ ಒಟ್ಟಾರೆ ಸಮಾಜ ಮತ್ತು ಶಾಲಾ- ಕಾಲೇಜ್‌ಗಳು ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.16ರಿಂದ 20 ವರ್ಷದೊಳಗಿನ 7 ಸಾವಿರದಷ್ಟು ಯುವಕ - ಯುವತಿಯನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದ ಸಂಶೋಧಕರು, ಅವರನ್ನು ನಾಲ್ಕು ಗುಂಪುಗಳನ್ನಾಗಿ ವಿಭಜಿಸಿದ್ದರು.ಪ್ರತಿ ದಿನ ಎರಡು ಅಥವಾ ಅದಕ್ಕಿಂತ ಹೆಚ್ಚು ಸಮಯದವರೆಗೆ ಇಂಟರ್‌ನೆಟ್ ಬಳಸುವ, ಪ್ರತಿ ದಿನ ಎರಡು ಗಂಟೆಗಳಿಗಿಂತ ಕಡಿಮೆ ಸಮಯದವರೆಗೆ ಅಂತರ್‌ಜಾಲ ಜಾಲಾಡುವ, ಅನಿಯಮಿತವಾಗಿ ಇಂಟರ್‌ನೆಟ್ ಬಳಸುವ ಅಥವಾ ವಾರದಲ್ಲಿ ಒಂದು ಬಾರಿ ಇಲ್ಲವೇ ಅದಕ್ಕಿಂತ ಕಡಿಮೆ ಸಮಯವನ್ನು ಇಂಟರ್‌ನೆಟ್ ಜಾಲಾಡುವವರು, ಇಂಟರ್‌ನೆಟ್ ಅನ್ನೇ  ಬಳಸದ ಅಥವಾ ಒಂದು ತಿಂಗಳಿನಿಂದ ಅಂತರ್‌ಜಾಲ ಜಾಲಾಡವರು- ಹೀಗೆ ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿ ಅಧ್ಯಯನ ನಡೆಸಲಾಗಿತ್ತು.ನಿಯಮಿತವಾಗಿ ಸೀಮಿತ ಅವಧಿಯಲ್ಲಿ ಬಳಸುವವರಿಗಿಂತ ದಿನಕ್ಕೆ ಹೆಚ್ಚಿನ ಸಮಯವನ್ನು ಇಂಟರ್‌ನೆಟ್‌ಗೆ ಮೀಸಲಿಟ್ಟ ಯುವಕ - ಯುವತಿಯರಲ್ಲಿ ಖಿನ್ನತೆ ಮತ್ತಿತರ ಮಾನಸಿಕ ಸಮಸ್ಯೆಗಳು ಕಂಡು ಬಂದಿದ್ದವು. ತರುಣರಲ್ಲಿ ಸ್ಥೂಲಕಾಯತೆ ಮತ್ತು ತರುಣಿಯರಲ್ಲಿ ನಿದ್ರಾಹೀನತೆ ಕಂಡು ಬಂದಿತ್ತು. ಇಂಟರ್‌ನೆಟ್ ಬಳಸದವರಲ್ಲಿಯೂ ನಿಯಮಿತವಾಗಿ ಬಳಸುವವರಿಗೆ ಹೋಲಿಸಿದರೆ, ಗರಿಷ್ಠ ಪ್ರಮಾಣದ ಖಿನ್ನತೆ ಕಂಡು ಬಂದಿತ್ತು. ಇವರೆಲ್ಲ ತಮ್ಮ ಸಹಪಾಠಿಗಳ ಜತೆ ಸಂಪರ್ಕದಲ್ಲಿ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ಹದಿವಯಸ್ಸಿನಲ್ಲಿ ಬಹುತೇಕ ಯುವಕ - ಯುವತಿಯರು ಗುಂಪಿನೊಂದಿಗೆ ಗುರುತಿಸಿಕೊಳ್ಳಲು ಮತ್ತು ಸಹಪಾಠಿಗಳ ನಿರಂತರ ಸಂಪರ್ಕದಲ್ಲಿ ಇರಲು ಬಯಸುತ್ತಾರೆ. ಎಲ್ಲರ ಜೊತೆ ಬೆರೆಯಲು ಸಾಧ್ಯವಾಗದವರು ಏಕಾಂಗಿಯಾಗುತ್ತಾರೆ. ಇದು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ ಎಂದು ಸಂಶೋಧನಾ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.          l

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry