ಲಾಗಿನ್: ಫೇಸ್‌ಬುಕ್; ಮಾನಸಿಕ ಒತ್ತಡ ಹೆಚ್ಚಳ?

7

ಲಾಗಿನ್: ಫೇಸ್‌ಬುಕ್; ಮಾನಸಿಕ ಒತ್ತಡ ಹೆಚ್ಚಳ?

Published:
Updated:

ಜನಪ್ರಿಯ ಸಾಮಾಜಿಕ ಸಂಪರ್ಕ ತಾಣ ‘ಫೇಸ್‌ಬುಕ್’ನಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸ್ನೇಹಿತರನ್ನು ಮಾಡಿಕೊಳ್ಳಲು ಮುಂದಾಗುವ ಮುನ್ನ ಕೊಂಚ ಯೋಚಿಸಿ ಮುನ್ನಡೆಯಿರಿ. ಈ ತಾಣದಲ್ಲಿ ಹೆಚ್ಚು ಸ್ನೇಹಿತರು ಇದ್ದಷ್ಟೂ ಮಾನಸಿಕ ಒತ್ತಡ ಹೆಚ್ಚಾಗುವುದು ಎಂದು ಹೊಸ ಅಧ್ಯಯನ ಎಚ್ಚರಿಸಿದೆ.ಅಂತರ್‌ಜಾಲ ತಾಣಗಳ ಬಳಕೆ ಬಗ್ಗೆ ಹೆಚ್ಚು ವ್ಯಸನ ಹೊಂದಿದವರಲ್ಲಿ  ‘ಫೇಸ್‌ಬುಕ್’ಗೆ ಸಂಬಂಧಿಸಿದ ವ್ಯಾಕುಲತೆ ಹೆಚ್ಚಲಿದೆ ಎಂದು ಮನಶಾಸ್ತ್ರಜ್ಞರು ನಿರ್ಧಾರಕ್ಕೆ ಬಂದಿದ್ದಾರೆ. ಸದ್ಯಕ್ಕೆ ಫೇಸ್‌ಬುಕ್ ತಾಣವು ವಿಶ್ವದಾದ್ಯಂತ 50 ಕೋಟಿಗಳಿಗಿಂತಲೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಜೊತೆ ಸಂಪರ್ಕದಲ್ಲಿ ಇರುವ ಅನುಕೂಲತೆಯ ಪ್ರಯೋಜನಗಳಿಗಿಂತ ಮಾನಸಿಕ ಒತ್ತಡವೇ ಸಮಸ್ಯೆಯಾಗಿ ಕಾಡಬಹುದು ಎಂದೂ ಎಚ್ಚರಿಸಿದ್ದಾರೆ.ಈ ತಾಣದ ಉಪಯುಕ್ತತೆ ಬಗ್ಗೆ ಎಡಿನ್‌ಬರ್ಗ್ ನೇಪಿಯರ್ ವಿಶ್ವವಿದ್ಯಾನಿಲಯದ ಸಂಶೋಧಕರು ವಿದ್ಯಾರ್ಥಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳಿ ಪಡೆದುಕೊಂಡ ಉತ್ತರ ಆಧರಿಸಿ ಸಂಶೋಧಾನಾ ವರದಿ ಪ್ರಕಟಿಸಿದ್ದಾರೆ. ಸ್ನೇಹಿತರ ಕೋರಿಕೆ ತಳ್ಳಿ ಹಾಕಿದರೆ ತಮ್ಮಲ್ಲಿ ಅಪರಾಧಿ ಮನೋಭಾವ ಕಾಡುತ್ತದೆ ಎಂದು ಕೆಲವರು ಹೇಳಿಕೊಂಡಿದ್ದಾರೆ.  ಈ ತಾಣದ ವೀಕ್ಷಣೆ ಮತ್ತು ಬಳಕೆ ಮಾಡುವಾಗ ತಳಮಳದ ಅನುಭವ ಆಗುತ್ತದೆ ಎಂದು 10 ವಿದ್ಯಾರ್ಥಿಗಳಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಉತ್ತರಿಸಿದ್ದಾರೆ.ಹೆಚ್ಚೆಚ್ಚು ಜನರ ಜೊತೆ ಸಂಪರ್ಕ ಹೊಂದಿದವರು ಮತ್ತು ಈ ತಾಣದಲ್ಲಿ ಹೆಚ್ಚು ಸಮಯ ಕಳೆಯುವವರಲ್ಲಿ ಮಾನಸಿಕ ಒತ್ತಡವೂ ಕಂಡುಬಂದಿದೆ ಎಂದು ಅಧ್ಯಯನದ ಮುಖ್ಯಸ್ಥೆ ಕ್ಯಾಥೆ ಚಾರ್ಲ್ಸ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry