ಸೋಮವಾರ, ಜೂನ್ 14, 2021
27 °C
ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

ಲಾಟರಿಯಲ್ಲಿ ಗೋವಿಂದಗೌಡ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಕೋಲಾರ ಚಿಕ್ಕಬಳ್ಳಾ­ಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎಂ.ಗೋವಿಂದಗೌಡ ಮತ್ತು ಉಪಾ­ಧ್ಯಕ್ಷರಾಗಿ ಎಚ್.ವಿ.­ನಾಗರಾಜ್‌ ಲಾಟರಿ ಮೂಲಕ ಸೋಮವಾರ ಆಯ್ಕೆಯಾದರು.ಬ್ಯಾಂಕ್ ಸಭಾಂಗಣದಲ್ಲಿ ಎಲ್ಲ ನಿರ್ದೇಶಕರ ಸಮ್ಮುಖದಲ್ಲಿ ಬೆಳಿಗ್ಗೆ 10.30ರ ವೇಳೆಗೆ ಮತ ಎಣಿಕೆ ಪ್ರಕ್ರಿಯೆ ಶುರುವಾಯಿತು.15 ನಿರ್ದೇಶಕರು ಮತ್ತು ಸಹಕಾರ ಜಂಟಿ ನಿಬಂಧಕರು, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಮತ್ತು ಸರ್ಕಾರದ ಪ್ರತಿನಿಧಿ ಸೇರಿದಂತೆ ಎರಡೂ ಸ್ಥಾನಕ್ಕೆ ತಲಾ 18 ಮತಗಳ ಎಣಿಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂ.ಗೋವಿಂದ­ಗೌಡ, ಕೆ.ವಿ.­ಶಂಕರಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹನುಮಂತರೆಡ್ಡಿ, ಪಿ.ವಿ.­ನಾಗರಾಜ್ ತಲಾ 9 ಮತ ಪಡೆದರು.ಎಲ್ಲರೂ ಸಮಾನ ಮತ ಪಡೆದ ಪರಿಣಾಮವಾಗಿ ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರ ಉಪ­ನಿಯಮ 17ರ ಅಡಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಲಾಟರಿ ಮೂಲ­ಕವೇ ಆಯ್ಕೆ ಮಾಡಲಾಗು­ವುದು ಎಂದು ಚುನಾವಣಾಧಿಕಾರಿ ಸಿ.ಎನ್.ಮಂಜುನಾಥ್ ತಿಳಿಸಿದರು. ಸ್ಪರ್ಧಿಗಳ ಹೆಸರನ್ನು ಬರೆದಿರುವ ಎರಡು ಚೀಟಿಗಳನ್ನು ಡಬ್ಬಕ್ಕೆ ಹಾಕಿ ನಂತರ ತೆಗೆಯಲಾಯಿತು. ಅಧ್ಯಕ್ಷರಾಗಿ ಗೋವಿಂದಗೌಡ ಆಯ್ಕೆಯಾದರು. ಅದೇ ರೀತಿ ನಡೆದ ಲಾಟರಿ ಪ್ರಕ್ರಿಯೆ­ಯಲ್ಲಿ ನಾಗರಾಜ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.ಕಾಂಗ್ರೆಸ್‌ ತೆಕ್ಕೆಗೆ: ಕಳೆದ ನ.29ರಂದು, ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನದ ಚುನಾ­ವಣೆ ಹಿಂದಿನ ದಿನ ದಿಢೀರ್ ಜೆಡಿಎಸ್‌ ಪಾಳೆಯದಿಂದ ಕಾಂಗ್ರೆಸ್‌ ಸೇರಿದ್ದ  ಗೋವಿಂದಗೌಡರೇ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಬ್ಯಾಂಕ್ ಆಡಳಿತ ಕಾಂಗ್ರೆಸ್‌ ತೆಕ್ಕೆಗೆ ದೊರಕಿ­ದಂತಾಗಿದೆ. ಉಪಾಧ್ಯಕ್ಷ ಸ್ಥಾನಕ್ಕಷ್ಟೇ ಜೆಡಿಎಸ್‌ ತೃಪ್ತಿಪಡುವಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.