ಲಾಟರಿ ಏಕಿಲ್ಲ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಲಾಟರಿ ಏಕಿಲ್ಲ

Published:
Updated:

ಬೆಂಗಳೂರು ಮಹಾನಗರ ಸಂಸ್ಥೆಗೆ ಬಸ್ ಪ್ರಯಾಣ ದರ ಏರಿಸುವ ಚಾಳಿ. ಇದರ ಜತೆಗೆ ದಿನದ ಹಾಗೂ ತಿಂಗಳ ಪಾಸುಗಳ ದರವನ್ನು ಸಹ ಏಕಾಏಕಿ ಹೆಚ್ಚು ಮಾಡಿರುವುದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬಿಸಿತುಪ್ಪವಾಗಿದೆ.

ಆಶ್ಚರ್ಯದ ಸಂಗತಿಯೆಂದರೆ ಮಾಸಿಕ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಲಾಟರಿ ಯೋಜನೆಯನ್ನು ರದ್ದುಗೊಳಿಸಿದೆ.ಈ ಹಿಂದೆ ಲಾಟರಿ ಯೋಜನೆಯಿಂದ ಕೆಲವರಿಗಾದರೂ ಅದೃಷ್ಟ ಖುಲಾಯಿಸಿ ಒಂದಿಷ್ಟು ಲಾಭ ಸಿಗುತ್ತಿತ್ತು. ಆದರೆ ಆ ಅವಕಾಶ ಈಗ ಇಲ್ಲವಾಗಿದೆ. ಬಿಎಂಟಿಸಿ ಕೇವಲ ಲಾಭದ ಕಡೆಗೆ ಲಕ್ಷ್ಯ ವಹಿಸಿದಂತೆ ಕಾಣುತ್ತಿದೆ.ಆದ್ದರಿಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಪುನಃ ಲಾಟರಿ ಯೋಜನೆಯನ್ನು ಜಾರಿಗೆ ತಂದರೆ ಪ್ರಯಾಣಿಕರಿಗೆ ಕೊಂಚ ಸಮಾಧಾನವಾಗುವುದಲ್ಲವೇ?

 -ಎಲ್. ಶಶಿಕುಮಾರ್ಬಸ್‌ಗಳಲ್ಲಿ ರೇಡಿಯೊ ಕಿರಿಕಿರಿ ಏಕೆ?

ಸುಮಧುರ ಗೀತೆಗಳು ಕಿವಿಗೆ ಇಂಪಾಗಿರಬೇಕಾದರೆ ವಾಲ್ಯೂಮ್ (ಧ್ವನಿ) ಕಡಿಮೆ ಇಡಬೇಕು. ಹೆಚ್ಚಾದರೆ ಕರ್ಕಶವಾಗಿ ಕೇಳುಗರಿಗೆ ತಲೆಚಿಟ್ಟು ಹಿಡಿಯುತ್ತದೆ.

ಅನೇಕ ವೋಲ್ವೋ ಬಸ್‌ಗಳಲ್ಲಿ ಸಂಜೆ ವೇಳೆಯಲ್ಲಿ ರೇಡಿಯೋ ಆನ್ ಮಾಡಿ ಕರ್ಕಶವಾಗಿ ಕೇಳಿಸಲಾಗುತ್ತಿದೆ. ಇದು ಚಾಲಕನಿಗೆ ಖುಷಿ ನೀಡಬಹುದು.ಆದರೆ ಕೆಲಸ ಕಾರ್ಯಗಳ ಒತ್ತಡದಿಂದ ಕಛೇರಿಯಿಂದ ಮನೆಗೆ ತೆರಳುವವರಿಗೆ ಹಿಂಸೆ ಆಗುತ್ತಿದೆ. ರೇಡಿಯೋ ಹಾಕಲಿ; ಆದರೆ ಮೆಲು ಧ್ವನಿ ಇಟ್ಟರೆ ಪ್ರಯಾಣಿಕರಿಗೂ ಹಿತಕರ ಅಲ್ಲವೇ?

 -ರಮ್ಯಾ ಬೆಳ್ಳಾವೆ

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry