ಲಾಟರಿ ಪ್ರಕ್ರಿಯೆ ಸೋಲಿಗೆ ಕಾರಣ: ವರ್ತೂರು

7

ಲಾಟರಿ ಪ್ರಕ್ರಿಯೆ ಸೋಲಿಗೆ ಕಾರಣ: ವರ್ತೂರು

Published:
Updated:

ಕೋಲಾರ: ನಗರದಲ್ಲಿ ಇತ್ತೀಚೆಗೆ ನಡೆದ ತಾಲ್ಲೂಕು ಪ್ರಾಥಮಿಕ ಸಹಕಾರ, ಕೃಷಿ ಮತ್ತು ಗ್ರಾಮೀಣ ಭೂ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ಚುನಾವಣೆಯಲ್ಲಿ ಲಾಟರಿ ಪ್ರಕ್ರಿಯೆ ನಡೆದ ಪರಿಣಾಮ ತಮ್ಮ ಬಣದ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ದೊರೆತಂತಾಯಿತು ಎಂದು ಸಚಿವ ಆರ್.ವರ್ತೂರು ಪ್ರಕಾಶ್ ಹೇಳಿದ್ದಾರೆ.ನಗರದ ಬೈರೇಗೌಡ ನಗರದ ತಮ್ಮ ಮನೆಯಲ್ಲಿ ಭಾನುವಾರ ಬ್ಯಾಂಕ್ ನೂತನ ಉಪಾಧ್ಯಕ್ಷ ಕೃಷ್ಣೇಗೌಡರನ್ನು ಅಭಿನಂದಿಸಿ ಮಾತನಾಡಿದ ಅವರು, ಬ್ಯಾಂಕ್ ಚುನಾವಣೆಯ ಘಟನೆ ಬಗ್ಗೆ ಕಾರ್ಯಕರ್ತರು ಧೃತಿಗೆಡದೆ ಮುಂಬರುವ ಚುನಾವಣೆಗೆ ಸಜ್ಜಾಗಬೇಕು ಎಂದರು.ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲು ಅವಕಾಶವಿರುವ ಬ್ಯಾಂಕಿನಲ್ಲಿ ತಮ್ಮ ಬಣದ ಉಪಾಧ್ಯಕ್ಷರು ಮತ್ತು ನಿರ್ದೇಶಕರು ಹೆಚ್ಚು ಶ್ರಮಿಸಬೇಕು ಎಂದರು. ನಗರಸಭೆ ಸದಸ್ಯರಾದ ವಿ.ಪ್ರಕಾಶ್, ಸಿ.ಸೋಮಶೇಖರ್, ನಗರದ ಆಶ್ರಯ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಸಿ.ರಘುರಾಂ, ಜಿಲ್ಲಾ ವಕ್ಫ್  ಮಂಡಳಿ ಮಾಜಿ ಅಧ್ಯಕ್ಷ ಸಾಬೀರ್‌ಪಾಷ, ಆಟೋ ನಾರಾಯಣಸ್ವಾಮಿ ಇದ್ದರು.ಇಂದು ರೈತರ ಪ್ರತಿಭಟನೆ


ಚಿಕ್ಕಬಳ್ಳಾಪುರ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರು ಸೋಮವಾರ ಪ್ರತಿಭಟಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry