ಲಾಟೀನಿನಿಂದ ಬೆಂಕಿ ಅನಾಹುತ

ಭಾನುವಾರ, ಜೂಲೈ 21, 2019
21 °C

ಲಾಟೀನಿನಿಂದ ಬೆಂಕಿ ಅನಾಹುತ

Published:
Updated:

ಸ್ಮೆಥ್‌ವಿಕ್ (ಬ್ರಿಟನ್) (ಎಎಫ್‌ಪಿ): ಬರ್ಮಿಂಗ್‌ಹ್ಯಾಮ್ ಹೊರ ಭಾಗದಲ್ಲಿರುವ ರದ್ದಿ ಕಾಗದ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣಾ ಸ್ಥಾವರವೊಂದರಲ್ಲಿ ಸೋಮವಾರ ಲಾಟೀನು ಉರುಳಿ ಬಿದ್ದ ಪರಿಣಾಮ ಭಾರಿ ಬೆಂಕಿ ಅನಾಹುತ ಸಂಭವಿಸಿದೆ.ಸುಮಾರು ಒಂದು ಲಕ್ಷ ಟನ್ ತ್ಯಾಜ್ಯವು ಬೆಂಕಿಗೆ ಭಸ್ಮವಾಗಿದೆ. ದಟ್ಟ ಹೊಗೆಯು 1,800 ಮೀಟರ್ ಎತ್ತರದವರೆಗೂ ಹಬ್ಬಿತ್ತು.ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ತೊಡಗಿದ್ದ 10 ಮಂದಿಗೆ ಸಣ್ಣ ಗಾಯಗಳಾಗಿವೆ. ಅಗ್ನಿ ಆಕಸ್ಮಿಕಕ್ಕೆ ಕಾರಣವಾದ ಲಾಟೀನು ಚೀನಾ ನಿರ್ಮಿತ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry