ಲಾಠಿಚಾರ್ಜ್: ತನಿಖೆಗೆ ಒತ್ತಾಯ

7

ಲಾಠಿಚಾರ್ಜ್: ತನಿಖೆಗೆ ಒತ್ತಾಯ

Published:
Updated:

ಬಾಗಲಕೋಟೆ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸುವಂತೆ ಒತ್ತಾಯಿಸಿ ಇತ್ತೀಚಿಗೆ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಅಮಾಯಕರ ಮೇಲೆ ಲಾಠಿಚಾರ್ಜ್ ಮಾಡಿ ಸುಳ್ಳು ದೂರು ದಾಖಲಿ ಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಪ್ರಕರಣದ ಕುರಿತು ಉನ್ನತಮಟ್ಟದ ತನಿಖೆ ಯಾಗಬೇಕು ಎಂದು ಒತ್ತಾಯಿಸಿ ಮಾದಿಗ ಮೀಸ ಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಡಳಿತ ಭವನದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದ ಎಂಆರ್‌ಎಚ್‌ಎಸ್ ಪದಾಧಿಕಾರಿ ಗಳು ವಿವಿಧ ಬೇಡಿಕೆಗಳ ಮನವಿ ಯನ್ನು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಅವರಿಗೆ ಸಲ್ಲಿಸಿದರು.ಒಳಮೀಸಲಾತಿ ಸಂಬಂಧ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಲಾಠಿ ಪ್ರಹಾರದಿಂದ ಹಲ್ಲೆಗೊಳಗಾದ ಅಮಾಯಕರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಅಮಾಯಕರ ಮೇಲೆ ಹಾಕಿದ ದೂರನ್ನು ಹಿಂಪಡೆಯಬೇಕು. ಬಾಡಿಗೆಗೆ ತಂದ ಬಸ್, ಕ್ರೂಜರ್‌ಗಳ ಗ್ಲಾಸ್‌ಗಳನ್ನು ಒಡೆದು ನಾಶ ಮಾಡಿದ್ದಕ್ಕಾಗಿ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ಮರೇಗುದ್ದಿ, ಡಿ.ವೈ. ಮಾದರ, ವೈ.ವೈ.ತಿಮ್ಮೋಪುರ, ಸಿದ್ದು ಸತ್ತೆನ್ನವರ, ತಿಪ್ಪಣ್ಣ ಕಟ್ಟಿಮನಿ, ಸಂತೋಷ ನಾಟಿಕಾರ, ದ್ಯಾಮಣ್ಣ ದೊಡ್ಡಮನಿ, ಸಂಜು ಮಾದರ, ಹಣಮಂತ ಬಂಡಿ ಗಣಿ, ಮಹಾದೇವ ದೊಡ್ಡಮನಿ, ಸಂತೋಷ ದೊಡ್ಡಮನಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry