ಲಾಠಿ ಪ್ರಹಾರ ಖಂಡಿಸಿ ಮಸ್ಕಿ ಬಂದ್

7

ಲಾಠಿ ಪ್ರಹಾರ ಖಂಡಿಸಿ ಮಸ್ಕಿ ಬಂದ್

Published:
Updated:

ಮಸ್ಕಿ:  ಬೆಳಗಾವಿಯಲ್ಲಿ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರ ಘಟನೆಯನ್ನು ಖಂಡಿಸಿ ಇಲ್ಲಿನ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ  ಕರೆ ನೀಡಿದ್ದ `ಮಸ್ಕಿ ಬಂದ್' ಗುರುವಾರ ಯಶಸ್ವಿಯಾಯಿತು.ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಪ್ರಸಕ್ತ ಅಧಿವೇಶನದಲ್ಲಿಯೇ ಜಾರಿಗೊಳಿಸುವಂತೆ ಒತ್ತಾಯಿಸಲು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಡಿ. 11 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನಾ ರ‌್ಯಾಲಿ ಹಮ್ಮಿಕೊಂಡಿದ್ದಾಗ  ಪೊಲೀಸರು ಲಾಠಿ ಪ್ರಹಾರ ಮಾಡಿದ್ದನ್ನು ಖಂಡಿಸಿ ಬಂದ್ ಆಚರಿಸಲಾಯಿತು.ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿನ ಅಂಗಡಿಗಳು ಮುಚ್ಚಿದ್ದವು. ಮುಖ್ಯ ಬಜಾರ್ ಸೇರಿದಂತೆ ಪ್ರಮುಖ ಸ್ಥಳಗಳು ಬಿಕೋ ಎನ್ನುತ್ತಿದ್ದವು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಶಾಲೆ, ಕಾಲೇಜುಗಳಿಗೆ ರಯನ್ನು ಘೋಷಿಸಲಾಗಿತ್ತು.ಅಂಬೇಡ್ಕರ್ ಭವನದಿಂದ ಹೊರಟ ಪ್ರತಿಭಟನಾ ರ‌್ಯಾಲಿ ದೈವದ ಕಟ್ಟೆ, ವಾಲ್ಮೀಕಿ ವೃತ್ತ, ಕನಕ ವೃತ್ತ, ಹಳೇ ಬಸ್ ನಿಲ್ದಾಣ ಮೂಲಕ ಮುದಗಲ್ ವೃತ್ತಕ್ಕೆ ಆಗಮಿಸಿತು.ಅಲ್ಲಿ ಧರಣಿ ನಡೆಸಿ ಲಾಯಿತು ಸಮಿತಿ ಮುಖಂಡರಾದ ಸಿ. ದಾನಪ್ಪ. ದೊಡ್ಡಪ್ಪ ಮುರಾರಿ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪುರ, ತಾಲ್ಲೂಕು ಪಂಚಾಯ್ತಿ ಸದಸ್ಯ ಹನುಮಂತಪ್ಪ ಮೋಚಿ, ಸುರೇಶ ಅಂತರಗಂಗಿ, ಅಶೋಕ ಮುರಾರಿ, ಯಮನೂರ ಒಡೆಯರ್, ಮೌನೇಶ ಮುರಾರಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry