ಲಾಡೆನ್ ಹತ್ಯೆ:ಸಮಿತಿ ರಚನೆ

7

ಲಾಡೆನ್ ಹತ್ಯೆ:ಸಮಿತಿ ರಚನೆ

Published:
Updated:

ಇಸ್ಲಾಮಾಬಾದ್ (ಐಎಎನ್‌ಎ): ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಹತ್ಯೆಯ ತನಿಖೆಯನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದ ಐವರು ಸದಸ್ಯರ ಸಮಿತಿ ನಡೆಸಲಿದೆ.ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ರಚಿಸಿರುವ ಈ ಸಮಿತಿಯ ನೇತೃತ್ವವನ್ನು ಹಿರಿಯ ನ್ಯಾಯಮೂರ್ತಿ ಜಾವೆದ್ ಇಕ್ಬಾಲ್ ವಹಿಸಿಕೊಳ್ಳಲಿದ್ದಾರೆ. ಹಿಂದೆ ದೆಹಲಿಯಲ್ಲಿ ಹೈ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದ ಮಾಜಿ ರಾಜತಾಂತ್ರಿಕ ಅಶ್ರಫ್ ಜಹಾಂಗೀರ್ ಖಾಜಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಇತರ ಸದಸ್ಯರಾಗಿದ್ದಾರೆ. ಪಾಕಿಸ್ತಾನದಲ್ಲಿ ಒಸಾಮ ಅಸ್ತಿತ್ವ, ಅಮೆರಿಕದ ಕಾರ್ಯಾಚರಣೆ, ಘಟನೆಯಲ್ಲಿ ದೇಶದ ಅಧಿಕಾರಿಗಳ ವೈಫಲ್ಯ ಇತ್ಯಾದಿಗಳ ಬಗ್ಗೆ ತನಿಖೆ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry