ಸೋಮವಾರ, ಆಗಸ್ಟ್ 2, 2021
26 °C

ಲಾಡೆನ್ ಹತ್ಯೆ ಐತಿಹಾಸಿಕ ಮೈಲುಗಲ್ಲು: ಭಾರತ ಬಣ್ಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹತ್ಯೆಯನ್ನು ಒಂದು ಐತಿಹಾಸಿಕ ಮೈಲುಗಲ್ಲು ಎಂದು ಸೋಮವಾರ ಬಣ್ಣಿಸಿರುವ ಭಾರತ, ಪಾಕಿಸ್ತಾನವು ಉಗ್ರರಿಗೆ ಸುರಕ್ಷಿತ ತಾಣ ಎಂಬುವುದನ್ನು ಈ ಹತ್ಯೆ ಸಾಬಿತುಪಡಿಸಿದೆ ಎಂದು ಹೇಳಿದೆ.

 

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಹಾಗೂ ಗೃಹಮಂತ್ರಿ ಪಿ.ಚಿದಂಬರಂ ಈ ಕುರಿತಂತೆ ಹೇಳಿಕೆ ನೀಡಿ ‘ಇದೊಂದು ಐತಿಹಾಸಿಕ ಬೆಳವಣಿಗೆಯಾಗಿದ್ದು, ಅಲ್‌ಖೈದಾ ಮುಖ್ಯಸ್ಥನಿಗಾಗಿ ಅಮೆರಿಕ ದಶಕಗಳ ಕಾಲ ನಡೆಸಿದ ಶೋಧನೆಗೆ, ಈ ಹತ್ಯೆಯ ಕಾರ್ಯಾಚರಣೆಯಿಂದ ಪೂರ್ಣ ವಿರಾಮ ಸಿಕ್ಕಂತಾಗಿದೆ. ಹಾಗೂ ಉಗ್ರವಾದದ ವಿರುದ್ದ ಅಮೆರಿಕ ಸೇನೆ ನಡೆಸಿದ ಜಾಗತೀಕ ಯುದ್ದದ ವಿಜಯವಾಗಿದೆ~. ಎಂದು ತಿಳಿಸಿದ್ದಾರೆ.~ನಮ್ಮ ನೆರೆಯ ರಾಷ್ಟ್ರವೇ ಉಗ್ರರ ಪಾಲಿಗೆ ಸುರಕ್ಷಿತ ತಾಣವಾಗಿದ್ದು, ಮುಂಬರುವ ದಿನಗಳಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಸಂಘಟಿತ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಿದೆ~ ಎಂದು ಕೃಷ್ಣ ಹೇಳಿದರು.

 

ಇದೇ ಸಂದರ್ಭದಲ್ಲಿ ಕೃಷ್ಣ ‘2008ರಲ್ಲಿ ಮುಂಬೈ ಮೇಲೆ ನಡೆದ ದಾಳಿ ನಿಯೋಜಿಸಿದ ಲಷ್ಕರ್-ಇ-ತೋಯ್ಬಾ ಸಂಘಟನೆ ಸೇರಿದಂತೆ ಹಲವಾರು ಉಗ್ರಸಂಘಟನೆಗಳು ಸಧ್ಯ ಪಾಕಿಸ್ತಾನದಲ್ಲಿ ನೆಲೆಸಿವೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.