ಶನಿವಾರ, ಜೂನ್ 19, 2021
28 °C

ಲಾಡೆನ್ ಹತ್ಯೆ ಸಂಗತಿ ಜರ್ದಾರಿಗೆ ತಿಳಿದಿರಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಅಂತರ ರಾಷ್ಟ್ರೀಯ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಹತ್ಯೆಗಾಗಿ ಅಮೆರಿಕದ ಸೇನೆ ನಡೆಸಿದ ಕಾರ್ಯಾಚರಣೆಯ ಬಗ್ಗೆ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ ಎಂದು ಪಾಕಿಸ್ತಾನದ ಆಡಳಿತ ಮತ್ತು ಸೇನೆ ಸ್ಪಷ್ಟಪಡಿಸಿವೆ.`ತಮ್ಮ ಒಪ್ಪಿಗೆ ಪಡೆದ ಬಳಿಕವೇ ಲಾಡೆನ್ ವಿರುದ್ಧ ಅಮೆರಿಕ ಕಾರ್ಯಾಚರಣೆ ನಡೆಸಿದೆ ಎಂದು ಅಧ್ಯಕ್ಷ ಜರ್ದಾರಿ ಅವರು, ಸೇನಾ ಮುಖ್ಯಸ್ಥ ಅಶ್ಫಾಕ್ ಪರ್ವೇಜ್ ಕಯಾನಿ ಅವರಿಗೆ ದೂರವಾಣಿಯಲ್ಲಿ ತಿಳಿಸಿದ್ದರು~ ಎಂಬ ಪಾಕಿಸ್ತಾನ ಮೂಲದ ಅಮೆರಿಕದ ಉದ್ಯಮಿ ಮತ್ತು ಮೆಮೊಗೇಟ್ ಹಗರಣದ ಆರೋಪಿ ಮನ್ಸೂರ್ ಇಜಾಜ್ ಹೇಳಿಕೆಯನ್ನು ಹಿರಿಯ ಅಧಿಕಾರಿಗಳು ಹಾಗೂ ಸೇನಾಧಿಕಾರಿಗಳು ತಳ್ಳಿಹಾಕಿದ್ದಾರೆ.`ಕಳೆದ ವರ್ಷ ಮೇ 2ರಂದು ಲಾಡೆನ್ ಮನೆಯ ಮೇಲೆ ಅಮೆರಿಕದ ಸೇನಾ ಪಡೆ ನಡೆಸಿದ ದಾಳಿಯ ಬಗ್ಗೆ ಜರ್ದಾರಿ ಅವರಿಗೆ ಪೂರ್ವ ಮಾಹಿತಿ ಇತ್ತು ಎಂಬ ಇಜಾಜ್ ಹೇಳಿಕೆ ಮತ್ತು ಪತ್ರಿಕಾ ವರದಿಗಳು ಸಂಪೂರ್ಣ ಸುಳ್ಳು~ ಎಂದು ಅಧ್ಯಕ್ಷರ ವಕ್ತಾರ ಫರ‌್ಹತುಲ್ಲಾ ಬಾರ್ಬರ್ ಹೇಳಿದ್ದಾರೆ.ಸೇನಾ ವಕ್ತಾರರು ನೀಡಿದ ಪ್ರತ್ಯೇಕ ಪತ್ರಿಕಾ ಪ್ರಕಟಣೆಯೂ ಇದನ್ನೇ ಪುನರುಚ್ಚರಿಸಿದ್ದು, `ಅಮೆರಿಕದ ಕಾರ್ಯಾಚರಣೆ ಕುರಿತು ಜರ್ದಾರಿ ಮತ್ತು ಕಯಾನಿ ನಡುವೆ ಮೇ 1 ಮತ್ತು 2ರ ರಾತ್ರಿ ಯಾವುದೇ ಸಂಭಾಷಣೆ ನಡೆದಿರಲಿಲ್ಲ~ ಎಂದು ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.