ಲಾಭದತ್ತ ಔಷಧ ತಯಾರಿಕಾ ಕ್ಷೇತ್ರ

7

ಲಾಭದತ್ತ ಔಷಧ ತಯಾರಿಕಾ ಕ್ಷೇತ್ರ

Published:
Updated:

ಮುಂಬೈ (ಪಿಟಿಐ): ಡಿಸೆಂಬರ್‌ಗೆ  ಅಂತ್ಯಗೊಂಡ ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕ ಅವಧಿ­ಯಲ್ಲಿ ಔಷಧ ತಯಾರಿಕಾ ಕಂಪೆನಿಗಳ ಒಟ್ಟು ಲಾಭಾಂಶ ವಾರ್ಷಿಕ ಶೇ 15ರಷ್ಟು ವೃದ್ಧಿಯಾಗುವ ಸಾಧ್ಯತೆ ಕಂಡುಬಂದಿದೆ.‘4ನೇ ತ್ರೈಮಾಸಿಕ ಅವಧಿಯಲ್ಲಿ­ಯಂತೂ ಔಷಧ ತಯಾರಿಕಾ ಉದ್ಯಮ ದೊಡ್ಡ ಲಾಭದತ್ತ ಸಾಗುವ ನಿರೀಕ್ಷೆ­ಯಿದೆ. ಈ ಕ್ಷೇತ್ರಕ್ಕೆ ಅಮೆರಿಕ ಕಂಪೆನಿಗಳ ಪ್ರವೇಶ ಮತ್ತು ವಿದೇಶಿ ವಿನಿಮಯ ಮೌಲ್ಯದ ಅನುಕೂಲಕರ ಬೆಳವಣಿಗೆ ಈ ನಿಟ್ಟಿನಲ್ಲಿ ಸಹಕಾರಿ­ಯಾದ ಪ್ರಮುಖ ಅಂಶಗಳಾಗಿವೆ’ ಎಂದು ‘ಕೋಟಕ್‌ ಇನ್‌ಸ್ಟಿಟ್ಯೂಷ­ನಲ್‌ ಇಕ್ಸಿಟಿಸ್‌’ ಇತ್ತೀಚೆಗೆ ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ.ಔಷಧ ತಯಾರಿಕಾ ಕ್ಷೇತ್ರದಲ್ಲಿ ದೇಶಿಯ ಲಾಭಾಂಶ ವೃದ್ಧಿ ಕೆಳಮಟ್ಟ­ದ­­ಲ್ಲಿ­ದ್ದರೂ, ಅಮೆರಿಕದ ಪ್ರವೇಶ ಸದೃ­ಢ­ವಾಗಿ ಉಳಿದಿದೆ. ಅಲ್ಲದೆ, ಆ ದೇಶದ ಪ್ರಾಡಕ್ಟ್‌ ಮಿಕ್ಸ್‌ ಮತ್ತು ಕರೆನ್ಸಿ ಭಾರತೀಯ ಜೆನೆರಿಕ್ಸ್‌ನ ಚೇತ­ರಿಕೆಗೆ ಪ್ರಮುಖ ಚಾಲಕ ಶಕ್ತಿ­ಗಳಾ­ಗಲಿವೆ ಎಂದು ವರದಿ ಗಮನ ಸೆಳೆದಿದೆ.‘ಸದ್ಯದ ತ್ರೈಮಾಸಿಕ ಅವಧಿಯಲ್ಲಿ ಭಾರತೀಯ ರೂಪಾಯಿ ಹಿಂದಿನ ತ್ರೈಮಾಸಿಕ ಅವಧಿಯ ಅಂತ್ಯಕ್ಕೆ ಕ್ರಮವಾಗಿ ಶೇ 1ರಷ್ಟು  ಏರಿಕೆ ಕಂಡಿರುವುದರಿಂದ ಔಷಧ ತಯಾರಿಕಾ ಕಂಪೆನಿಗಳ ಲಾಭಾಂಶ ಪ್ರಗತಿ ಹೊಂದಬಹುದು ಎಂಬ ನಿರೀಕ್ಷೆಯಿದೆ’ ಎಂದು ವರದಿಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry