ಬುಧವಾರ, ಜುಲೈ 28, 2021
26 °C

ಲಾಭ ತರದ ಬಾಳೆ, ಸಂಕಷ್ಟದಲ್ಲಿ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಭ ತರದ ಬಾಳೆ, ಸಂಕಷ್ಟದಲ್ಲಿ ರೈತ

ಅಕ್ಕಿಆಲೂರ: ಹಲವು ನಿರೀಕ್ಷೆಗಳೊಂದಿಗೆ ಬಾಳೆ ಬೆಳೆದು ಆರ್ಥಿಕ ಸದೃಢತೆಯ ಕನಸು ಕಂಡಿದ್ದ ಈ ಪ್ರದೇಶದ ರೈತ ವಲಯಕ್ಕೆ ಬಾಳೆ ಬೆಲೆ ಶಾಕ್ ನೀಡಿದೆ. ಉತ್ತಮ ಬೆಲೆ ನೀರೀಕ್ಷೆಯಲ್ಲಿದ್ದ ರೈತರು ಆಘಾತಗೊಂಡಿದ್ದಾರೆ.ಕಳೆದ ಸುಮಾರು 2-3 ವರ್ಷಗಳ ಅವಧಿಯಲ್ಲಿ ಪ್ರತಿ ಕ್ವಿಂಟಲ್‌ಗೆ ಗರಿಷ್ಠರೂ 900 ವರೆಗೂ ಬೆಲೆ ದೊರೆತಿತ್ತು. ಆದರೆ ಸದ್ಯರೂ 550 ರಿಂದ 580 ರಷ್ಟು ಬೆಲೆ ದೊರೆಯುತ್ತಿರುವುದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.ಅಕ್ಕಿಆಲೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುಮಾರು 50 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಾಳೆ ಬೆಳೆದಿರುವ ರೈತರು ಉತ್ತಮ ಬೆಲೆ ದೊರೆಯದೇ ಇರುವುದರಿಂದ ಚಿಂತಿಗೀಡಾಗಿದ್ದಾರೆ.ಇಲ್ಲಿನ ಹವಾಗುಣ ಬಾಳೆ ಬೆಳೆಯಲು ಉತ್ತಮವಾಗಿದ್ದರಿಂದ ಮೊದಲಗೆ ಕೆಲವು ರೈತರು ಬಾಳೆ ಬೆಳೆದು ಉತ್ತಮ ಲಾಭ ಗಳಿಸಿದ್ದರು. ಇದನ್ನು ಕಂಡ ಇತರ ರೈತಾಪಿ ವರ್ಗ ಬಾಳೆ ಬೆಳೆಯಲು ಆರಂಭಿಸಿದರು. ಆದರೆ ಸದ್ಯ ಉತ್ತಮ ಬೆಲೆ ಸಿಗದೆ ಬೆಳೆಗಾರರು ಪರದಾಡುತ್ತಿದ್ದಾರೆ.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ತೋಟಗಾರಿಕೆಗೆ ಸಾಕಷ್ಟು ಉತ್ತೇಜನ ದೊರೆಯಿತು. ರಿಯಾಯತಿ ದರದಲ್ಲಿ ಬಾಳೆ ಸಸಿ ಹಾಗೂ ಹನಿ ನೀರಾವರಿಯ ಸಲಕರಣೆಗಳ ವಿತರಣೆ ಮಾಡಿ ಹೆಚ್ಚಿನ ಪ್ರೋತ್ಸಾಹವನ್ನೂ ನೀಡಿತು. ಆದರೆ ಸದ್ಯ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ.ದಲ್ಲಾಳಿಗಳ ಹಾವಳಿ, ವ್ಯವಸ್ಥಿತ ಸಂಗ್ರಹಣಾ ವ್ಯವಸ್ಥೆ ಇಲ್ಲದಿರುವುದರಿಂದಲೂ ರೈತರಿಗೆ ತೊಂದರೆಯಾಗುತ್ತಿದೆ. ಇಲ್ಲಿ ಬೆಳೆದ ಬಾಳೆ ಹೆಚ್ಚಾಗಿ ಪಕ್ಕದ ಗೋವಾ ರಾಜ್ಯಕ್ಕೆ ರಫ್ತಾಗುತ್ತಿತ್ತು. ಈ ನಡುವೆ ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಬಾಳೆ ರಫ್ತಾಗುತ್ತಿರುವುದರಿಂದ ಇಲ್ಲಿನ ಬಾಳೆಗೆ ಬೇಡಿಕೆ ಕಡಿಮೆಯಾಗಿದ್ದು, ಬೆಲೆ ಕುಸಿದಿದೆ ಎನ್ನಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.