ಲಾಭ ಮಾಡಿಕೊಳ್ಳುವ ತವಕ

7

ಲಾಭ ಮಾಡಿಕೊಳ್ಳುವ ತವಕ

Published:
Updated:

ನವದೆಹಲಿ (ಪಿಟಿಐ): ಸತತ ಆರು ವಾರಗಳಿಂದ ಏರಿಕೆಯ ಹಾದಿಯಲ್ಲಿರುವ ಮುಂಬೈ ಷೇರುಪೇಟೆ ಸೂಚ್ಯಂಕ, ಈ ವಾರ ಸ್ವಲ್ಪ ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆ ಹೆಚ್ಚಿರುವುದರಿಂದ, ಲಭಿಸುವ ಅವಕಾಶದಲ್ಲಿ ಲಾಭ ಮಾಡಿಕೊಳ್ಳುವ ತವಕದಲ್ಲಿ ಹೂಡಿಕೆದಾರರಿದ್ದಾರೆ. ಇದರಿಂದ ಷೇರುಗಳ ಖರೀದಿ ಭರಾಟೆ ಹೆಚ್ಚಿದೆ. ಕೋಲ್ ಇಂಡಿಯಾ, ಎಸ್‌ಬಿಐ, ಟಾಟಾ ಮೋಟಾರ್ಸ್, ಸಿಪ್ಲಾ ಸೇರಿದಂತೆ ಹಲವು ಪ್ರಮುಖ ಕಂಪೆನಿಗಳು ಈ ವಾರ ಮೂರನೆಯ ತ್ರೈಮಾಸಿಕ ಅವಧಿಯ ಹಣಕಾಸು ಸಾಧನೆ ಪ್ರಕಟಿಸಲಿವೆ. ಈ ಸಂಗತಿಗಳು ಕೂಡ ಪೇಟೆಯ ಏರಿಳಿತಗಳ ಮೇಲೆ ಪ್ರಭಾವ ಬೀರಬಹುದು.ಕಳೆದ ವಾರಾಂತ್ಯದಲ್ಲಿ ಜಾಗತಿಕ ಷೇರು ಪೇಟೆಗಳು ಇಳಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿವೆ. ಈ  ಹಿನ್ನೆಲೆಯಲ್ಲಿ, ಸೋಮವಾರ ನೀರಸ ವಹಿವಾಟು ನಡೆಯುವ ಸಾಧ್ಯತೆ ಹೆಚ್ಚು ಎಂದು `ಸಿಎನ್‌ಐ~ ಸಂಸ್ಥೆಯ ಅಧ್ಯಕ್ಷ ಕಿಶೋರ್ ಒಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ.ಜನವರಿ ತಿಂಗಳ ಹಣದುಬ್ಬರ ಅಂಕಿ ಅಂಶಗಳು ಫೆಬ್ರುವರಿ 14ರಂದು ಪ್ರಕಟಗೊಳ್ಳಲಿವೆ. ದೇಶೀಯ ಮಟ್ಟದಲ್ಲಿ ಈ ಸಂಗತಿ ಕೂಡ ಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರಬಹುದು. ಜಾಗತಿಕ ಮಟ್ಟದಲ್ಲಿ, ಗ್ರೀಸ್ ಸಾಲದ ನೆರವಿನ ಪ್ಯಾಕೇಜ್‌ಗೆ ಸಂಬಂಧಿಸಿದ ಬೆಳವಣಿಗೆಗಳನ್ನು ಷೇರು ಪೇಟೆಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು `ಏಂಜೆಲ್ ಬ್ರೋಕಿಂಗ್~ ಹೇಳಿದೆ.ಡಾಲರ್ ಎದುರು ರೂಪಾಯಿ ಮೌಲ್ಯ ಸ್ಥಿರಗೊಂಡಿರುವುದು ಮತ್ತು `ಎಫ್‌ಐಐ~ ಖರೀದಿ ಭರಾಟೆ ಹೆಚ್ಚಿರುವುದರಿಂದ ಹೂಡಿಕೆದಾರರಲ್ಲಿ ವಿಶ್ವಾಸ ಮರಳಿದೆ. ಕಳೆದ ವಾರದಲ್ಲಿ `ಎಫ್‌ಐಐ~ ಹೂಡಿಕೆದಾರರು ಒಟ್ಟು ರೂ.3,893 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಸೂಚ್ಯಂಕ ಇದುವರೆಗೆ ಶೇ 14ರಷ್ಟು ಏರಿಕೆ ಕಂಡಿದೆ. ಪೇಟೆಯ ಬಂಡವಾಳ ಮೌಲ್ಯವೂ ಹೆಚ್ಚಿದೆ ಎಂದು ಬೊನಾಂಜ ಷೇರು ಸಂಸ್ಥೆಯ ವಿಶ್ಲೇಷಕ ಶಾನು ಗೊಯಲ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry