ಲಾರಿಗೆ ಕಾರು ಡಿಕ್ಕಿ: ಚಾಲಕ ಸಾವು

7

ಲಾರಿಗೆ ಕಾರು ಡಿಕ್ಕಿ: ಚಾಲಕ ಸಾವು

Published:
Updated:

ಹೊಸಕೋಟೆ: ರಸ್ತೆಯ ಬದಿ ಕೆಟ್ಟು ನಿಂತಿದ್ದ ಲಾರಿಯ ಹಿಂಭಾಗಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡ ಘಟನೆ ಹೆದ್ದಾರಿಯ ಮೇಡಹಳ್ಳಿ ಮೇಲ್ಸೆತುವೆಯಲ್ಲಿ ನಡೆದಿದೆ.ಕಾಡುಗೋಡಿಯ ವಸಂತಕುಮಾರ್ (41) ಮೃತಪಟ್ಟವರು. ತೀವ್ರವಾಗಿ ಗಾಯಗೊಂಡ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು. ಕಾರಿನಲ್ಲಿದ್ದ ವಸಂತಕುಮಾರ್ ಅವರ ಮಗ ವಿಜಯಕಿರಣ್ ಎಂಬುವರು ಗಾಯಗೊಂಡಿದ್ದು ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ.ವಸಂತಕುಮಾರ್ ಅವರು ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry