ಸೋಮವಾರ, ಮೇ 16, 2022
28 °C

ಲಾರಿ, ಟಂಟಂ ಡಿಕ್ಕಿ: 6 ಜನರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ (ಗುಲ್ಬರ್ಗ ಜಿ.): ಯರಗೋಳ ಮತ್ತು ನಾಲವಾರ ಮಧ್ಯೆ ಯಾದಗಿರಿ ಮುಖ್ಯರಸ್ತೆಯಲ್ಲಿ ಲಾರಿ ಮತ್ತು ಟಂಟಂ ನಡುವೆ ಡಿಕ್ಕಿ ಸಂಭವಿಸಿ 6 ಜನ ಸ್ಥಳದಲ್ಲಿಯೇ ಮೃತಪಟ್ಟು, 7 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ 10ಗಂಟೆಗೆ ನಡೆದಿದೆ.ಯಾಗಾಪುರ ಗ್ರಾಮದಲ್ಲಿ ಪಡಿತರ ಚೀಟಿಗಾಗಿ ಫೋಟೊ  ತೆಗೆಸಿಕೊಳ್ಳಲು ಹೋಗಿದ್ದ ಇವರು, ಸರ್ವರ್ ಡೌನ್ ಆಗಿದ್ದ ಕಾರಣ,  ಟಂಟಂ ಮೂಲಕ ಚಿತ್ತಾಪುರಕ್ಕೆ ಹೋಗಿ  ಅರ್ಜಿ ಸಲ್ಲಿಸಿ ಬರುತ್ತಿರುವಾಗ ಅಪಘಾತ ಸಂಭವಿಸಿದೆ.ಮೃತರು ನಾಲವಾರ ಹತ್ತಿರ ಇರುವ ಯಾಗಾಪುರ ಸಮೀಪದ ಪತ್ತು ನಾಯಕ ತಾಂಡಾಕ್ಕೆ ಸೇರಿದವರಾದ್ದಾರೆ. ಮೃತರಲ್ಲಿ 1 ಮಗು, ಒಬ್ಬ ಮಹಿಳೆ ಸೇರಿದ್ದಾರೆ. ಗಾಯಗೊಂಡಿರುವ 7 ಜನರನ್ನು ಯಾದಗಿರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.