ಶುಕ್ರವಾರ, ಜೂನ್ 25, 2021
21 °C

ಲಾರಿ ಡಿಕ್ಕಿ: ವಿದ್ಯಾರ್ಥಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಿಯಮ್ಮನಹಳ್ಳಿ: ಬೈಕ್‌ಗೆ ಕಂಟೇನರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ವಿದ್ಯಾರ್ಥಿ ಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿ, ಇನೊಬ್ಬ ವಿದ್ಯಾರ್ಥಿ ತೀವ್ರ ಗಾಯಗೊಂಡ ಘಟನೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 13ರ ಭಾರತ್ ಪೆಟ್ರೊಲ್ ಬಂಕ್ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.ಮೃತಪಟ್ಟ ವಿದ್ಯಾರ್ಥಿಯನ್ನು 4ನೇ ಬಿ ವಾರ್ಡ್‌ನ ನಿವೃತ್ತ ಶಿಕ್ಷಕಿ ಪಾರ್ವತಮ್ಮ ಅವರ ಮೊಮ್ಮಗ ಕಾರ್ತಿಕ್ (15) ಎಂದು ಗುರುತಿಸಲಾಗಿದೆ. ಮಂಜುನಾಥ  ತೀವ್ರ ಗಾಯಗೊಂಡ ವಿದ್ಯಾರ್ಥಿ.ಇಲ್ಲಿಗೆ ಸಮೀಪದ ವ್ಯಾಸನಕೆರೆಯ ಸ್ಮಯೋರ್ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ  ಕಾರ್ತಿಕ್ ಮತ್ತು ಮಂಜುನಾಥ ಬೆಳಿಗ್ಗೆ ಬೈಕ್‌ನಲ್ಲಿ ತೆರಳಿ ಪೆಟ್ರೊಲ್ ಹಾಕಿಸಿ ಕೊಂಡು ಸಾಗುತ್ತಿದ್ದಾಗ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರ್ತಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ತೀವ್ರ ಗಾಯಗೊಂಡ ಮಂಜುನಾಥ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತ ಮಾಡಿ ಪರಾರಿ ಆಗುತ್ತಿದ್ದ  ಲಾರಿಯನ್ನು ಮುರಳಿರಾಜ ಮತ್ತು  ಕುಮಾರ ನಾಯ್ಕ ಎಂಬ ಯುವಕರು ಬೈಕ್‌ನಲ್ಲಿ ಸುಮಾರು ದೂರ ಬೆನ್ನತ್ತಿ ತಡೆದು ನಿಲ್ಲಿಸಿ, ಲಾರಿ ಚಾಲಕ ಅಮಿನ್ ಖಾನ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.