ಸೋಮವಾರ, ಅಕ್ಟೋಬರ್ 21, 2019
26 °C

ಲಾರಿ ಮಗುಚಿ ಕ್ಲೀನರ್ ಸಾವು

Published:
Updated:

ಹೊಸಕೋಟೆ: ಕೋಲಾರ ರಸ್ತೆಯ ಕೊಳತೂರು ಗೇಟ್ ಬಳಿ ಗುರುವಾರ ರಾತ್ರಿ ಎರಡು ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಒಂದು ಲಾರಿ ಮಗುಚಿ ಬಿದ್ದು ಅದರಲ್ಲಿದ್ದ ಕ್ಲೆನರ್ ಸ್ಥಳದಲ್ಲೇ ಮೃತಪಟ್ಟು ಚಾಲಕ ಗಾಯಗೊಂಡಿದ್ದಾನೆ.ಬಿದರಹಳ್ಳಿ ಹೋಬಳಿ ಹಳೇಹಳ್ಳಿಯ ಮುನಿಯಪ್ಪ (30) ಮೃತಪಟ್ಟವರು. ಗಾಯಗೊಂಡ ಚಾಲಕ ಮುನಿರಾಜು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Post Comments (+)