ಲಾರಿ ಮುಷ್ಕರ ಸಂಧಾನ ವಿಫಲ

7

ಲಾರಿ ಮುಷ್ಕರ ಸಂಧಾನ ವಿಫಲ

Published:
Updated:

ಬೆಂಗಳೂರು: ಮರಳು ನೀತಿ ವಿರುದ್ಧ ಮರಳು ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ 21ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ಜತೆ ಶುಕ್ರವಾರ ನಡೆಸಿದ ಸಂಧಾನ ವಿಫಲವಾಗಿದೆ. ಮುಷ್ಕರ ಮುಂದುವರಿಸುವುದಾಗಿ ಲಾರಿ ಮಾಲೀಕರು ಘೋಷಿಸಿದ್ದಾರೆ.‘ರಾಜ್ಯ ಸರ್ಕಾರ ಮರಳು ತೆಗೆಯುವುದಕ್ಕೆ ಮಾತ್ರ ನೀತಿ ರೂಪಿಸಿದೆ. ಸಾಗಣೆ ಬಗ್ಗೆ ನೀತಿಯನ್ನೇ ಮಾಡಿಲ್ಲ’ ಎಂದು ಆರೋಪಿಸಿ ಲಾರಿ ಮಾಲೀಕರು ಮುಷ್ಕರ ನಡೆಸುತ್ತಿ­ದ್ದಾರೆ. ಷಣ್ಮುಗಪ್ಪ ಮತ್ತು ಚೆನ್ನಾರೆಡ್ಡಿ ನೇತೃತ್ವದ ಲಾರಿ ಮಾಲೀಕರ ಸಂಘ­ಗಳು ಮುಷ್ಕರದಲ್ಲಿ ಭಾಗವಹಿಸಿವೆ.ಈ ಎರಡೂ ಸಂಘಗಳ ಪ್ರತಿನಿ­ಧಿ­ಗಳ ಜತೆ ಸಚಿವರು ಪ್ರತ್ಯೇಕ ಸಭೆಗ­ಳನ್ನು ನಡೆಸಿ, ಮುಷ್ಕರ ವಾಪಸ್‌ ಪಡೆಯುವಂತೆ ಮನವಿ ಮಾಡಿದರು.ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಗೃಹ ಸಚಿವ ಕೆ.ಜೆ.ಜಾರ್ಜ್‌, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಭೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry