ಭಾನುವಾರ, ಜೂನ್ 13, 2021
26 °C

ಲಾರಿ ಹರಿದು 6 ಜಾನುವಾರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ರಾಯಚೂರು ವನ್ಮಾರ ಪಳ್ಳಿ ರಾಜ್ಯ ಹೆದ್ದಾರಿ–15ರಲ್ಲಿನ ತಾಲ್ಲೂಕಿನ ತುಮಕುಂಟಾ ಘಾಟ್‌ನಲ್ಲಿ ಬೀದರ್‌ ಕಡೆಯಿಂದ ಚಿಂಚೋಳಿ ಕಡೆಗೆ ಬರುತ್ತಿದ್ದ ಲಾರಿಯೊಂದು ಜಾನುವಾರುಗಳ ಹಿಂಡಿನ ಮೇಲೆ ನುಗಿದ ಪರಿಣಾಮ 6 ರಾಸುಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.ಅಡವಿಗೆ ಮೇಯಲು ಹೋಗಿದ್ದ ರಾಸುಗಳು ಮರಳಿ ಮನೆಗೆ ಬರುವಾಗ ನಡೆದ ದುರ್ಘಟನೆಯಲ್ಲಿ 2 ಎಮ್ಮೆ, 4 ಹಸು ಮೃತಪಟ್ಟಿದ್ದು ಸುಮಾರು 10ರಿಂದ15 ರಾಸುಗಳಿಗೆ ಕಾಲಿ ಪೆಟ್ಟಾಗಿದ್ದಲ್ಲದೇ, ತರಚಿದ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭು ದಂಡಿನ್‌ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ರಘುನಾಥರಾವ್‌ ತುಮಕುಂಟಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.ಲಾರಿಯ ಚಾಲಕನ ಮೇಲೆ ಜನರು ಹಲ್ಲೆಗೆ ಯತ್ನಿಸಿದಾಗ, ಚುನಾವಣೆಯ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ಚಾಲಕನನ್ನು ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಮಾಹಿತಿ ನೀಡಿದರು.  ಘಟನೆಯಲ್ಲಿ ರಾಮಣ್ಣ ಚಂದ್ರಪ್ಪ ಪೂಜಾರಿ, ಮತ್ತು ವೀರಶೆಟ್ಟಿ ಚನ್ನಬಸಪ್ಪ ರಾಗಾ ಅವರ ಎಮ್ಮೆ, ಜಗನ್ನಾಥ ರೇವಣಸಿದ್ದಪ್ಪ ಗೋಣಿ, ಸೂರ್ಯಕಾಂತ ಧೂಳಪ್ಪ ಹಲಗಿ, ಶಾಂತಾ ಬಾಯಿ ವೆಂಕಟರಾವ್‌ ಕುಲ್ಕರ್ಣಿ, ರೇವಣಸಿದ್ದಪ್ಪ ರಾಮಣ್ಣ ದಂಡಿನ ಹಸುಗಳು ಮೃತಪಟ್ಟಿವೆ.ಘಟನೆ ಬಗ್ಗೆ ಮಾಹಿತಿ ತಿಳಿಯು ತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಧನರಾಜ ಬೊಮ್ಮಾ ಹಾಗೂ ನಿರೀಕ್ಷಕ ಭೋಗಪ್ಪ ಯಲಾಲ್‌ ಮೃತ ರಾಸುಗಳ ಮರಣೋತ್ತರ ಪರೀಕ್ಷೆ ನಡೆಸಿದರು.ಚಾಲಕನ ನಿಷ್ಕಾಳಜಿಯೇ ಘಟನೆಗೆ ಕಾರಣ ಎಂದು ದೂರಿದ ಗ್ರಾಮಸ್ಥರು, ಇಲ್ಲಿ ವೇಗ ನಿಯಂತ್ರಕ ಅಳವಡಿಸ ಬೇಕೆಂದು ಆಗ್ರಹಿಸಿದ್ದಾರೆ.

ಘಟನೆ ಸಂಜೆ 6 ಗಂಟೆಗೆ ನಡೆದರೆ ಪೊಲೀಸರು ವಿಳಂಬವಾಗಿ ಬಂದರು. ಈ  ಧೋರಣೆ ಸ್ಥಳೀಯರು ಖಂಡಿಸಿದರು.

ಘಟನೆಯಿಂದಾಗಿ ತುಮಕುಂಟಾ ಗ್ರಾಮದ ನೂರಾರು ಮಂದಿ ಘಟನಾ ಸ್ಥಳಕ್ಕೆ ಬಂದು ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 2 ಗಂಟೆಗೂ ಹೆಚ್ಚು ಕಾಲ ನೂರಾರು ವಾಹನ ದಾರಿ ಮಧ್ಯೆ ನಿಂತಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.