ಲಾಲಿ ಹಾಡಿನ ಪರಂಪರೆ ಬೆಳೆಸಬೇಕು
ಬೆಂಗಳೂರು: `ಸಾಹಿತ್ಯ ಕ್ಷೇತ್ರದಲ್ಲಿ ಲಾಲಿ ಹಾಡುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆತಾಗ ಮಾತ್ರ ಸ್ವಸ್ಥ ಮನಸ್ಸಿನ ಯುವ ಪೀಳಿಗೆಯನ್ನು ರೂಪಿಸಲು ಸಾಧ್ಯ~ ಎಂದು ಸಾಹಿತಿ ಡಾ.ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಅಭಿಪ್ರಾಯಪಟ್ಟರು.
ಅಂಕಿತ ಪುಸ್ತಕ ಪ್ರಕಾಶನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಾಗೂರು ಮಾರ್ಕಂಡೇಯ ಅವರ `ಲಾಲಿ ಹಾಡುಗಳು~ ಮತ್ತು `ತಾರೆಗಳ ಬಳಗ~ ಹಾಗೂ ಡಾ. ಟಿ.ಎಸ್. ದೇವರಾಜ್ ಅವರ `ವಿದೇಶಿ ನೇರ ಬಂಡವಾಳ ಮತ್ತು ಚಿಲ್ಲರೆ ಮಾರಾಟ~ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
`ಅತಿ ಸೂಕ್ಷ್ಮವಾಗಿರುವ ಮಕ್ಕಳ ಮನಸ್ಸಿಗೆ ಲಾಲಿ ಹಾಡಿನ ಮೂಲಕ ವಿಚಾರಧಾರೆಯನ್ನು ತಿಳಿಯಪಡಿಸಬಹುದು. ಲಾಲಿ ಹಾಡು ಮತ್ತು ಕೈತುತ್ತಿನ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಮತ್ತೆ ಲಾಲಿ ಹಾಡನ್ನು ಗುನುಗುನಿಸುವಂತೆ ಈ ಪುಸ್ತಕ ಪ್ರೇರೇಪಿಸುತ್ತದೆ~ ಎಂದು ತಿಳಿಸಿದರು.
`ಕ್ಲಿಷ್ಟ ಪದಗಳಿರುವ ಕವಿತೆಗಳನ್ನು ಮಕ್ಕಳಿಗೆ ತಿಳಿಸುವುದಕ್ಕಿಂತ ಲಾಲಿ ಹಾಡಿನ ಮೂಲಕ ಸಂದೇಶ ನೀಡಬಹುದಾಗಿರುವುದರಿಂದ ಸಾಹಿತಿಗಳು ಲಾಲಿ ಹಾಡಿನ ಪರಂಪರೆಯನ್ನು ಬೆಳಸಬೇಕು~ ಎಂದು ಸಲಹೆ ಮಾಡಿದರು.
ಮೈಸೂರು ವಿವಿ ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಎಚ್.ಟಿ.ವೆಂಕಟೇಶ್ಮೂರ್ತಿ ಮಾತನಾಡಿ, `ನೇರ ಬಂಡಾವಳ ಮತ್ತು ಚಿಲ್ಲರೆ ಮಾರಾಟ ಕೇತ್ರ ಮತ್ತು ಜಾಗತಿಕ ಅಭಿವೃದ್ಧಿಯ ನಡುವೆ ಇರುವ ಹತ್ತು ಹಲವು ಒಳ ನೋಟಗಳನ್ನು ದೇವರಾಜ್ ಅವರ ಪುಸ್ತಕವು ತೆರೆದಿಡುತ್ತದೆ~ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಪೊಲೀಸ್ ಅಕಾರಿ ಬಿ.ಕೆ.ಶಿವರಾಂ ಇತರರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.