ಲಾವಣಿಯಲ್ಲಿ ವಿದ್ಯಾ ಲಾಸ್ಯ

7

ಲಾವಣಿಯಲ್ಲಿ ವಿದ್ಯಾ ಲಾಸ್ಯ

Published:
Updated:
ಲಾವಣಿಯಲ್ಲಿ ವಿದ್ಯಾ ಲಾಸ್ಯ

`ಫೆರಾರಿ ಕಿ ಸವಾರಿ~ ಬಿಡುಗಡೆಯಾಗಿದೆ. ಬೊಮ್ಮನ್ ಇರಾನಿ, ಶರ್ಮನ್ ಜೋಶಿ ನಟನೆಗಿಂತಲೂ ಗಮನ ಸೆಳೆದಿದ್ದು, ವಿದ್ಯಾ ಬಾಲನ್ ಲಾವಣಿ. 

ವಿಧು ವಿನೋದ್ ಚೋಪ್ರಾ ಈ ಚಿತ್ರದಲ್ಲಿ ಫೆರಾರಿಯಲ್ಲಿ ಮದುವೆ ದಿಬ್ಬಣ ಸಾಗುವಾಗ ಲಾವಣಿ ನೃತ್ಯವನ್ನು ಅಳವಡಿಸುವ ಯೋಚನೆ ಬಂದಿತ್ತಂತೆ. ಆಗಲೇ ಅವರು ವಿದ್ಯಾಗೆ ಸಂಪರ್ಕಿಸಿದ್ದು. ವಿದ್ಯಾ ಆಗ ತಮ್ಮ ತೂಕ ಈ ನೃತ್ಯಕ್ಕೆ ಹೆಚ್ಚಾಗಿದೆಯೇನೋ ಎಂಬ ಆತಂಕ ಹೊರಗೆಡವಿದ್ದರು.  ವರ್ಕೌಟ್ ಮಾಡಲು ಸ್ವಲ್ಪ ಕಾಲಾವಕಾಶವನ್ನೂ ಕೇಳಿದ್ದರಂತೆ. ಆದರೆ ವಿಧು ಮಾತ್ರ ಅದಕ್ಕೆ ಖಡಾಖಂಡಿತವಾಗಿ ನಿರಾಕರಿಸಿದರಂತೆ. ಲಾವಣಿಯ ತಮಾಸಾ ಪ್ರಕಾರದಲ್ಲಿ ಮುಖದ ಭಾವನೆಗಳೇ ಹೆಚ್ಚು ಪ್ರಾಧಾನ್ಯ ಗಳಿಸುತ್ತವೆ. ಮೈಮಾಟವಲ್ಲ.

ದೇಹದ ಲಾಸ್ಯ ಗಮನ ಸೆಳೆಯುತ್ತದೆ ಎಂದು ಮನವರಿಕೆ ಮಾಡಿಕೊಟ್ಟರಂತೆ. ನೃತ್ಯ ಸಂಯೋಜನೆಗಾಗಿ ಕೊಲ್ಹಾಪುರದ ಲಾವಣಿ ನೃತ್ಯಗಾತಿಯರನ್ನು ಕರೆಸಿ, ವಿದ್ಯಾಗೆ ತರಬೇತಿ ನೀಡಿದರಂತೆ.

ಲಾವಣಿ ನೃತ್ಯಾಂಗನೆಯರು ನೃತ್ಯದೊಂದಿಗೆ ಹಾವಭಾವಗಳನ್ನೂ ಭಂಗಿಗಳನ್ನೂ ಹೇಳಿಕೊಟ್ಟರು. ವಿದ್ಯಾ ಅವನ್ನೆಲ್ಲ ಚಾಚೂ ತಪ್ಪದೆ ಅಭಿನಯಿಸಿದ್ದು `ಫೆರಾರಿ ಕಿ ಸವಾರಿ~ಯ ಹಾಡಿನಲ್ಲಿ ಎದ್ದು ತೋರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry