ಬುಧವಾರ, ಏಪ್ರಿಲ್ 14, 2021
24 °C

ಲಿಂಗತಾರತಮ್ಯಕ್ಕೆ ಪರಿಹಾರವೂ ಉಂಟು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

23ನೇ ಜುಲೈ 2012ರ ವಾಚಕರವಾಣಿಯಲ್ಲಿ ಸಾವಿತ್ರಿ ಮುಜುಂದಾರರು ಲಿಂಗ ಸಮಾನತೆಗೆ ಆಯುರ್ವೇದ ಧಕ್ಕೆಯುಂಟು ಮಾಡುತ್ತದೆಯೆಂದು ಆರೋಪಿಸಿದ್ದಾರೆ. ಆದರೆ ಇದು ಪೂರ್ಣ ಸತ್ಯವಲ್ಲ.ಅವರೇ ಹೇಳಿರುವಂತೆ ಗಂಡು ಮಗುವನ್ನು ಪಡೆಯುವ ವಿಧಾನ ವಿವರಿಸುತ್ತಾ ಕೆಲವು ಮೂಲಿಕೆಗಳನ್ನು ತಿಳಿಸಿ ಮೂಗಿನ ಬಲಭಾಗದ ಹೊರಳಿನಲ್ಲಿ ಹಾಕಲು ಹೇಳಲಾಗಿದೆಯಲ್ಲವೇ? ಅಲ್ಲಿಯೇ ಮುಂದುವರೆದು ಹೆಣ್ಣುಮಗು ಬಯಸುವವರು ಅದೇ ಮೂಲಿಕೆಗಳ ರಸವನ್ನು ಎಡಭಾಗದ ಹೊರಳಿನಲ್ಲಿ ಹಾಕಲು ತಿಳಿಸಲಾಗಿದೆ. ಹೀಗೆ ಆಯುರ್ವೇದವು ಎರಡೂ ವಿಧಾನ ವಿವರಿಸಿದೆ.ಇಷ್ಟಕ್ಕೂ ಇವು ವೈಜ್ಞಾನಿಕವಾಗಿ ದೃಢಪಟ್ಟಿವೆಯೇ? ಶತಪ್ರತಿಶತ ಸಿದ್ಧ ಎಂಬುದು ಸಾಬೀತಾಗಿದೆಯೇ? ಪೂರ್ವ ಕಾಲದಲ್ಲಿ ಪುತ್ರೇಕಾಮೇಷ್ಟಿ ಯಜ್ಞ ಮಾಡುತ್ತಿದ್ದರು. ವಸಿಷ್ಠ ಮಹರ್ಷಿ ಹೇಳಿದಂತೆ ದಿಲೀಪ ಮಹಾರಾಜನು ಕೈಗೊಂಡ ಪುತ್ರ ಕಾಮೇಷ್ಟಿ  ಯಜ್ಞ ಕೈಗೂಡಲಿಲ್ಲ. ಅದಕ್ಕೆ ಕಾರಣ ಅವನಿಗಿದ್ದ ಶಾಪ! ಅವನಿಗೆ ನಂದಿನಿಯೆಂಬ ಹೆಣ್ಣು ಮಗುವೇ ಹುಟ್ಟಿತು.ಇದೆಲ್ಲವನ್ನು ಪರಿಗಣಿಸಿದಾಗ ಅಂಥಹ ತಳಬುಡವಿಲ್ಲದ ವೈಜ್ಞಾನಿಕವಾಗಿ ದೃಢಪಡದ ವಿಷಯಗಳಿಗೆ ಅನವಶ್ಯಕವಾಗಿ ಭಯಪಡುವ ಅಗತ್ಯವಿಲ್ಲ. ಇನ್ನು ಆಯುರ್ವೇದದ ವೈದ್ಯರು ಗಂಡು ಹೆಣ್ಣಿನ ಅನುಪಾತವನ್ನು ತುಂಬಲು ತುಂಬು ಸಹಕಾರ ನೀಡಬಲ್ಲರು. ಏಕೆಂದರೆ `ಸ್ತ್ರೀಹೀ ಮೂಲಮ್ ಅಪತ್ಯಾನಾಮ್ ಸ್ತ್ರೀಃ ರಕ್ಷಿತೀ ರಕ್ಷಿತಃ~ ಎಂಬುದನ್ನು ಅವರು ಚೆನ್ನಾಗಿ ಬಲ್ಲರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.