ಶುಕ್ರವಾರ, ಮೇ 14, 2021
31 °C

ಲಿಂಗನಮಕ್ಕಿಗೆ ನೀರಿನ ಒಳಹರಿವು ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್: ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿದ್ದ ಮಳೆ ನಿಂತು ಅಣೆಕಟ್ಟೆಗೆ ಬರುತ್ತಿದ್ದ ಒಳಹರಿವು ಇಳಿಕೆಯಾಗಿದೆ. ಜಲಾಶಯದ ಎಲ್ಲಾ ರೇಡಿಯಲ್ ಗೇಟ್‌ಗಳನ್ನ ಮುಚ್ಚಿದ್ದು, ಶನಿವಾರ 1816.6 ಅಡಿ ಅಣೆಕಟ್ಟೆಯಲ್ಲಿ ಸಂಗ್ರಹವಾಗಿದೆ ಎಂದು ಜಲಾಶಯ ವಿಭಾಗದ ಮುಖ್ಯ ಎಂಜಿನಿಯರ್ ರಾಜಮುಡಿ ತಿಳಿಸಿದ್ದಾರೆ.  ಒಳಹರಿವು 13,000 ಕ್ಯೂಸೆಕ್ ಇದ್ದು, ಲಿಂಗನಮಕ್ಕಿ ವಿದ್ಯುದಾಗಾರ ಮತ್ತು ಶರಾವತಿ ವಿದ್ಯುದಾಗಾರಕ್ಕೆ ಪೂರ್ಣ ಪ್ರಮಾಣದ ಬೇಡಿಕೆಗನುಗುಣವಾಗಿ ನೀರು ಪೂರೈಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.