ಲಿಂಗರಾಜ ದೇಸಾಯಿ ಪತ್ನಿಯರ ಸಮಾಧಿ ದುಃಸ್ಥಿತಿ

7

ಲಿಂಗರಾಜ ದೇಸಾಯಿ ಪತ್ನಿಯರ ಸಮಾಧಿ ದುಃಸ್ಥಿತಿ

Published:
Updated:
ಲಿಂಗರಾಜ ದೇಸಾಯಿ ಪತ್ನಿಯರ ಸಮಾಧಿ ದುಃಸ್ಥಿತಿ

ಸವದತ್ತಿ: ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರ, ಸಮಾಜದ ಹಿತಚಿಂತಕ, ಶಿಕ್ಷಣ ಪ್ರೇಮಿ ತ್ಯಾಗವೀರ ಲಿಂಗರಾಜ ದೇಸಾಯಿ ಅವರ 152ನೇ ಜಯಂತಿ ಆಚರಣೆ ಇದೇ 10ರಂದು ಅದ್ದೂರಿಯಾಗಿ ನಡೆ ಯುತ್ತಿದೆ.

ಆದರೆ ಪತಿಯ ಆದರ್ಶ ಮಾರ್ಗ ದಲ್ಲಿಯೇ ನಡೆದು ದೇಸಾಯಿ ಅವರ ಕೀರ್ತಿಗೆ ಪಾತ್ರ ರಾಗಿ ಕಷ್ಟನಷ್ಟಗಳನ್ನೆಲ್ಲನ್ನ ನುಂಗಿಕೊಂಡ ಅವರ 6 ಜನ ಧರ್ಮಪತ್ನಿಯರ ಸಮಾಧಿಗಳು ಸರ್ಕಾರದ ನಿರ್ಲಕ್ಷ್ಯದಿಂದ ಜೀರ್ಣಾವಸ್ಥೆಗೆ ತಲುಪಿವೆ.ನವಲಗುಂದ ಸಂಸ್ಥಾನದ ಮೂಲವಾದ ಕೊಕಟನೂರ ಪರಗಣೆಯನ್ನು  ಕ್ರಿ.ಶ.1302 ರಿಂದ 1564ರವರೆಗೆ ಒಟ್ಟು 9 ಜನ ದೇಸಾಯಿಯರು ಆಳ್ವಿಕೆ ಮಾಡಿದ್ದಾರೆ. ನಂತರ ಅದೇ ಮನೆತನದ 2ನೇ ವಿಠ್ಠಪ್ಪಗೌಡನಿಂದ   ಕ್ರಿ.ಶ. 1565ರಲ್ಲಿ ಸ್ಥಾಪಿತವಾದ ನವಲಗುಂದ ಸಂಸ್ಥಾನ ಅಡಿಯ ಸವದತ್ತಿಯನ್ನು 1302 ರಿಂದ 1787ರ ವರೆಗೆ ಒಟ್ಟು 485 ವರ್ಷಗಳ ಅವಧಿಯಲ್ಲಿ 21 ಜನ ದೇಸಾಯರು ಈ ಸಂಸ್ಥಾನವನ್ನು ಆಳಿದರು.1734ರಿಂದ 1758ರವರೆಗೆ ಆಳ್ವಿಕೆಯನ್ನು ಸುವರ್ಣ ಯುಗ ಹಾಗೂ ಸಾಧನೆಯ ಯುಗ ಎಂದು ಕರೆಸಿಕೊಂಡಿತು. ಸವದತ್ತಿ, ನವಲಗುಂದ, ಕುಸುಗಲ್ಲಗಳಲ್ಲಿ ಭವ್ಯವಾದ ಕೋಟೆ ಕಟ್ಟಿಸಿದ್ದು, ಅದರಲ್ಲಿ ಶಿರಸಂಗಿಯ ಎರಡು ಅಂತಸ್ತಿನ ಸುಂದರ ಭವ್ಯ ಅರಮನೆಯು ಮಹತ್ವದ್ದಾಗಿದೆ.1872 ಜೂನ್ 2ರಂದು ಲಿಂಗರಾಜರು ಶಿರಸಂಗಿಯ ಜಾಯಪ್ಪದೇಸಾಯಿ ಹಿರಿಯರಾಣಿ ಗಂಗಾಬಾಯಿವರಿಗೆ ದತ್ತಕ ಪುತ್ರರಾಗಿ ಉತ್ತರಾಧಿಕಾರಿಗಳಾಗಿ 23 ಆಗಸ್ಟ್ 1906ರವರೆಗೆ ಒಟ್ಟು 34 ವರ್ಷ ಸೇವೆಗೈದಿದ್ದಾರೆ. ನಾಡಿನ ಚರಿತ್ರೆಯಲ್ಲಿ ಕಲಿಯುಗದಕರ್ಣ ಎಂದು ಬಿರುದಾಂಕಿತ ಪಡೆದ ಲಿಂಗರಾಜ ದೇಸಾಯಿ ಅವರಿಗೆ 6 ಜನ ಪತ್ನಿಯರು, ಮೂವರು ಪುತ್ರರು ಇದ್ದರು.

ಸಣ್ಣ ವಯಸ್ಸಿನಲ್ಲಿಯೇ ಮಕ್ಕಳು ಅಕಾಲ ಮರಣಕ್ಕೆ ತುತ್ತಾಗಿದ್ದರಿಂದ ದೇಸಾಯಿ ಅವರ ಮನಸ್ಸು ಸಂಸಾರ ಸುಖಭೋಗಗಳಿಂದ ವಿಮುಖವಾಯಿತು. ನಂತರ ಸಮಾಜ ಕಲ್ಯಾಣಕ್ಕಾಗಿ ತಮ್ಮ ಜೀವನ ಮುಡು ಪಾಗಿಟ್ಟುಕೊಂಡು. ಈ ನಾಡಿನ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ ಸಾಮಾಜಿಕ ಇಚ್ಛಾಪತ್ರ, ದಾನಪತ್ರ ಬರೆದು ಘನವ್ಯಕ್ತಿತ್ವ ಹೊಂದಿದರು.ಸುಧಾರಣೆ: ಅತ್ಯಂತ ವೈಭವದಿಂದ ಆಳ್ವಿಕೆ ನಡೆಸಿದ ಶಿರಸಂಗಿಯ ದೇಸಾಯಿ ವಾಡೆಯನ್ನು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸುಧಾರಣೆ ಮಾಡಿದ್ದಾರೆ. ಇಲ್ಲಿನ ಹಾಳಾದ ಕಟ್ಟಿಗೆ, ಕೋಟೆಯ ಗೋಡೆಗಳನ್ನು ಪುನರ್ ನಿರ್ಮಾಣ ಮಾಡಿದ್ದು, ಲಿಂಗರಾಜರ ಅಭಿಮಾನಿಗಳಲ್ಲಿ ಅಲ್ಪ ಸಮಾಧಾನ ತಂದಿತ್ತು. ಇನ್ನೂ ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ಬಾಕಿ ಇವೆ. ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡುವಂತೆ ಆಗಬೇಕು ಎನ್ನುತ್ತಾರೆ ಪುರಸಭೆ ಮಾಜಿ ಅಧ್ಯಕ್ಷ ಎಂ.ಟಿ. ಶಿಗ್ಲಿ.ನಿರ್ಲಕ್ಷ್ಯ: ಮಕ್ಕಳಾಗಲಿಲ್ಲ ಎಂಬ ಕೊರಗು ಮನದಲ್ಲಿರಿಸಿಕೊಳ್ಳದೆ ತಮ್ಮ ಇಡೀ ಆಸ್ತಿಯನ್ನು ಸಮಾಜಕ್ಕೆ ಸಮರ್ಪಿಸಿದ ಮಹಾನ ತ್ಯಾಗಿ ಲಿಂಗರಾಜರಿಗೆ ಒಟ್ಟು 6 ಜನ ಪತ್ನಿಯರು. ಬಸಮ್ಮ, ಚನ್ನಮ್ಮ, ಗಿರಿಜಾಬಾಯಿ, ಭಾಗೀರಥಿಬಾಯಿ, ನೀಲುಬಾಯಿ, ಸುಂದರಾಬಾಯಿ ಸಮಾಧಿ ಗಳು ನಾಗರಿಕರ, ಅಧಿಕಾರಿಗಳ ಮತ್ತು ಸಮಾಜದ ಹಿರಿಯರ ನಿರ್ಲಕ್ಷ್ಯದಿಂದಾಗಿ ಇಂದು ಹಾಳುಕೊಂಪೆ ಯಾಗಿವೆ.ಸಮಾಧಿಯ ಸುತ್ತಲಿನ ಪರಿಸರ ಸಂಪೂರ್ಣ ಗಲೀಜಿನಿಂದ ಕೂಡಿದೆ. ಈ ದೃಶ್ಯ ನೋಡಿದ ಅಭಿಮಾನಿಗಳಲ್ಲಿ ಅವರ ವಂಶಸ್ಥರಲ್ಲಿ ಬೇಸರ ತರುವುದಲ್ಲದೆ. ಲಿಂಗರಾಜ ಟ್ರಸ್ಟ್ ಅಧ್ಯಕ್ಷರು, ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ವರು ಇತ್ತ ಗಮನ ಹರಿಸಿ ಅವರ ಬದುಕಿಗೆ ಬೆಳಕಾದ ಪತ್ನಿಯರ ಸಮಾಧಿಯನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ಕೇಂದ್ರವನ್ನಾಗಿಸಬೇಕು ಎಂದು ನಾಗರಿಕರ ಒತ್ತಾಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry