ಲಿಂಬಾವಳಿಗೆ ಕಾಯಕ ಯೋಗಿ ಪ್ರಶಸ್ತಿ

7

ಲಿಂಬಾವಳಿಗೆ ಕಾಯಕ ಯೋಗಿ ಪ್ರಶಸ್ತಿ

Published:
Updated:

ವೈಟ್‌ಫೀಲ್ಡ್: ಬಸವಾದಿ ಶರಣರ ತತ್ವಗಳು ಸಾಮಾಜಿಕ ಚಿಂತನೆಗೆ ಪೂರಕವಾಗಿವೆ ಎಂದು ಶಾಸಕ ಅರವಿಂದ ಲಿಂಬಾವಳಿ ಅಭಿಪ್ರಾಯಪಟ್ಟರು.ವರ್ತೂರಿನ ವೀರಶೈವ ಸಮಾಜ ಬಸವೇಶ್ವರ ಮತ್ತು ರೇಣುಕಾಚಾರ್ಯ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ `ಮಹದೇವಪುರ ಕಾಯಕ ಯೋಗಿ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವಿಭೂತಿಪುರ ವೀರಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಪ್ರಾಚೀನವಾದ ವೀರಶೈವ ಧರ್ಮ, ಎಲ್ಲ ವರ್ಗದ ಹಿತ ಬಯಸುತ್ತದೆ ಎಂದರು.ಬಿಜೆಪಿ ಕ್ಷೇತ್ರ ಘಟಕದ ಅಧ್ಯಕ್ಷ ಪಣತ್ತೂರು ವೆಂಕಟಸ್ವಾಮಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿ ಇತರರನ್ನು ಸನ್ಮಾನಿಸಲಾಯಿತು. ಗಾಯಕ ಶಿವಶಂಕರಶಾಸ್ತ್ರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವೀರಶೈವ ಸಮಾಜದ ಗಂಗಾಧರ್, ಪಾಲನೇತ್ರಪ್ಪ, ಕೈಕೊಂಡ್ರಹಳ್ಳಿ ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮಹೇಂದ್ರ ಮೋದಿ ಸ್ವಾಗತಿಸಿದರು. ಚಂದ್ರಶೇಖರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry