ಲಿಫ್ಟ್ ಸರಿಪಡಿಸಿ

7

ಲಿಫ್ಟ್ ಸರಿಪಡಿಸಿ

Published:
Updated:

ನಗರದ ಹೃದಯ ಭಾಗದಲ್ಲಿರುವ ನ್ಯಾಯಾಲಯಗಳ ಸಂಕೀರ್ಣದಲ್ಲಿ ನೂರಕ್ಕೂ ಅಧಿಕ ನ್ಯಾಯಾಲಯಗಳನ್ನು ಏಳು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಸ್ಥಾಪಿಸಲಾಗಿದೆ.ಅವುಗಳಿಗೆ ಸಂಬಂಧಿಸಿದ ಕಚೇರಿಗಳು, ಸುಮಾರು 30ಕ್ಕೂ ಅಧಿಕ ಅಭಿಯಂತರ ಕಚೇರಿಗಳು, ಕಾನೂನು ನೆರವು ಸಮಿತಿಯ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.ನ್ಯಾಯಾಲಯ ಸಂಕೀರ್ಣದಲ್ಲಿ ಮೂರು ಕಡೆ ಲಿಫ್ಟ್ ವ್ಯವಸ್ಥೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಆದರೆ ಸದರಿ 2 ಲಿಫ್ಟ್‌ಗಳು  ಹಲವು ದಿನಗಳಿಂದ ಕೆಟ್ಟು ಹೋಗಿವೆ.

ದುರಸ್ತಿಯಾಗದ ಕಾರಣ ವಿವಿಧ ಮಹಡಿಗಳಲ್ಲಿರುವ ನ್ಯಾಯಾಲಯಗಳಿಗೆ ಹಾಗೂ ಅಭಿಯಂತರರ ಕಚೇರಿಗಳಿಗೆ ಹೋಗಲು ಕಕ್ಷಿದಾರರಿಗೆ ಹಾಗೂ ಸಾಕ್ಷಿದಾರರಿಗೆ ತುಂಬಾ ತೊಂದರೆಯಾಗುತ್ತಿದೆ.ಕಾರಣ ನ್ಯಾಯಾಲಯಗಳ ಸಂಕೀರ್ಣದ ಮಧ್ಯೆ ಭಾಗದಲ್ಲಿರುವ ಲಿಫ್ಟ್‌ನ್ನು ತ್ವರಿತವಾಗಿ ದುರಸ್ತಿ ಮಾಡಿಸಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry