ಲಿಬರ್ಟಿಗೆ ಹೃತಿಕ್ ರಾಯಭಾರ

7

ಲಿಬರ್ಟಿಗೆ ಹೃತಿಕ್ ರಾಯಭಾರ

Published:
Updated:
ಲಿಬರ್ಟಿಗೆ ಹೃತಿಕ್ ರಾಯಭಾರ

ಲಿಬರ್ಟಿ ತನ್ನ ಸಾಂಪ್ರದಾಯಿಕ ಶೈಲಿಯ ಫುಟ್‌ವೇರ್‌ಗಳಿಗೆ ವಿಮೋಚನೆ ನೀಡಿ ಸಮಕಾಲೀನ ಹಾಗೂ ವಿನೂತನ ವಿನ್ಯಾಸವುಳ್ಳ ಆಕರ್ಷಕ ಫುಟ್‌ವೇರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದಕ್ಕೆ ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್ ಬ್ರಾಂಡ್ ರಾಯಭಾರಿ.ಲಿಬರ್ಟಿ ಈಗ ವಯೋಮಾನದವರಿಗೂ ಹೊಂದಿಕೊಳ್ಳುವ ಆಕರ್ಷಕ ಫುಟ್‌ವೇರ್‌ಗಳನ್ನು ಹೊರತಂದಿದೆ. ಜೊತೆಗೆ ಇಂದಿನ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ವಿಭಿನ್ನ ವಿನ್ಯಾಸವುಳ್ಳ ಮನಸೆಳೆವ ಶೂಗಳ ಶ್ರೇಣಿಯನ್ನು ಸಹ ಹೊರತಂದಿದೆ.`ಲಿಬರ್ಟಿ ವಿನೂತನ ವಿನ್ಯಾಸದ ಫುಟ್‌ವೇರ್‌ನೊಂದಿಗೆ ದಕ್ಷಿಣ ಭಾರತಕ್ಕೆ ಲಗ್ಗೆಯಿಟ್ಟಿದೆ. ಇದು ತನ್ನ ಗ್ರಾಹಕರಿಗಾಗಿ ನೂರಾರು ಬಗೆಯ ಆಕರ್ಷಕ ವಿನ್ಯಾಸವುಳ್ಳ ಫುಟ್‌ವೇರ್‌ಗಳನ್ನು ಹೊರತಂದಿದೆ. ಶೋರೂಂಗೆ ಭೇಟಿ ನೀಡುವ ಗ್ರಾಹಕರ ಮನಸ್ಸನ್ನು ಆಕರ್ಷಕ ಶೈಲಿಯ ಫುಟ್‌ವೇರ್‌ಗಳು ಮನ ಕದಿಯುತ್ತವೆ.

 

ಗುಣಮಟ್ಟದ ವಸ್ತು ಹಾಗೂ ಗ್ರಾಹಕ ಸ್ನೇಹಿ ಬೆಲೆ ನಿಗದಿ ಮಾಡಿರುವುದು ಇದರ ಮತ್ತೊಂದು ವಿಶೇಷತೆ. ಯವಕರ ನೆಚ್ಚಿನ ನಟ ಹೃತಿಕ್ ರೋಷನ್ ಲಿಬರ್ಟಿಯ ಹೊಸ ವಿನ್ಯಾಸದ ಶೂಗಳನ್ನು ಧರಿಸುವ ಮೂಲಕ ಯುವಕರ ಹೃದಯಕ್ಕೆ ಲಗ್ಗೆಯಿಟ್ಟಿದ್ದಾರೆ ಹಾಗೂ ಲಿಬರ್ಟಿಯತ್ತ ಸೆಳೆಯಲು ಸಜ್ಜಾಗಿದ್ದಾರೆ~ ಎನ್ನುತ್ತಾರೆ ಲಿಬರ್ಟಿಯ ಮಾರುಕಟ್ಟೆ ವ್ಯವಸ್ಥಾಪಕ ಅನುಪಮ್ ಬನ್ಸಾಲ್.  `ತಮ್ಮ ಮೋಹಕ ಹಾಗೂ ಆಕರ್ಷಕ ಶೈಲಿಯಿಂದ ಹೃತಿಕ್ ದೇಶಾದ್ಯಂತ ಖ್ಯಾತರಾದವರು. ಸ್ಟೈಲ್‌ಗೆ ಮತ್ತೊಂದು ಹೆಸರು. ನಮ್ಮ ದೇಶದ ಯುವಕರ ಪ್ರತಿನಿಧಿಯಂತೆ ಇದ್ದಾರೆ. ಅವರ ಯುವ ನಾಯಕತ್ವಕ್ಕೆ ಲಿಬರ್ಟಿ ಸಹಯೋಗ ನೀಡಿದೆ.

ಲಿಬರ್ಟಿ ತನ್ನ ಹಳೆ ಶೈಲಿಗೆ ಗುಡ್‌ಬೈ ಹೇಳಿ ಈಗ ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಲಿಬರ್ಟಿಯ ಈ ಹೊಸ ಶ್ರೇಣಿ ಯುವಕರನ್ನು ಸೆಳೆಯುವುದರಲ್ಲಿ ಸಂದೇಹವೇ ಇಲ್ಲ~ ಎನ್ನುವುದು ಅವರ ವಿಶ್ವಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry