ಲಿಬಿಯಾದಲ್ಲಿ ತಮಿಳುನಾಡಿನ ವ್ಯಕ್ತಿ ಸಾವು

7

ಲಿಬಿಯಾದಲ್ಲಿ ತಮಿಳುನಾಡಿನ ವ್ಯಕ್ತಿ ಸಾವು

Published:
Updated:

ತಿರುನಲ್ವೇಲಿ (ತಮಿಳುನಾಡು) (ಪಿಟಿಐ): ಲಿಬಿಯಾ ಜನಾಂದೋಲನದ ವೇಳೆ ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ತಮಿಳುನಾಡು ಮೂಲದ ಮುರುಗಯ್ಯ ಎಂಬ ವ್ಯಕ್ತಿ ಬಲಿಯಾಗಿ, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿರುವುದಾಗಿ ಅವರ ಕುಟುಂಬದ ಮೂಲಗಳು ಇಲ್ಲಿ ತಿಳಿಸಿವೆ.ಮುರುಗಯ್ಯ ಹುಂಡೈ ಕಂಪೆನಿಯ ಲಿಬಿಯಾ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮುರುಗಯ್ಯ ಅವರು ಗುಂಡೇಟಿಗೆ ಬಲಿಯಾಗಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಸ್ಪಷ್ಟನೆ ನೀಡಿದೆ. ಮೂವರು ಭಾರತೀಯರು ಮತ್ತು ಇಬ್ಬರು ಈಜಿಪ್ಟ್ ನಾಗರಿಕರು ಲಿಬಿಯಾದ ತೊಬ್ರುಕ್ ನಗರದಿಂದ ಕಾರಿನಲ್ಲಿ ಈಜಿಪ್ಟ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತು ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry