ಲಿಬಿಯಾದಿಂದ ಭಾರತೀಯರ ವಾಪಸಿಗೆ ವ್ಯವಸ್ಥೆ

7

ಲಿಬಿಯಾದಿಂದ ಭಾರತೀಯರ ವಾಪಸಿಗೆ ವ್ಯವಸ್ಥೆ

Published:
Updated:

ನವದೆಹಲಿ, (ಪಿಟಿಐ): ಈಗಾಗಲೇ ಈಜಿಪ್ಟ್‌ನಿಂದ ಬೆಂಗಜಿ ಎಂಬಲ್ಲಿಗೆ ‘ಸ್ಕಾಟಿಯಾ ಪ್ರಿನ್ಸ್’ ಎಂಬ ಹಡಗನ್ನು ಕಳುಹಿಸಲಾಗಿದೆ. ಅದು ಭಾನುವಾರ ಅಲ್ಲಿಗೆ ತಲುಪುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇರುವವರು, ಮಹಿಳೆಯರು, ಮಕ್ಕಳನ್ನು ಒಳಗೊಂಡು 1200 ಜನರನ್ನು ಮಾರ್ಚ್ 1ರ ವೇಳೆಗೆ ಈಜಿಪ್ಟ್‌ನ ಅಲೆಕ್ಸಾಂಡ್ರಿಯಾ ನಗರಕ್ಕೆ ಕರೆತರಲಾಗುತ್ತದೆ.ಅಲ್ಲಿಂದ ವಿಶೇಷ ಏರ್ ಇಂಡಿಯಾ ವಿಮಾನದ ಮೂಲಕ ಅವರು ತಾಯ್ನಾಡಿಗೆ ವಾಪಸಾಗಲಿದ್ದಾರೆ. ಜೊತೆಗೆ ವಿಮಾನವನ್ನು ಸಹ ಸನ್ನದ್ಧವಾಗಿ ಇರಿಸಿದ್ದು, ಅದು ಇಳಿಯಲು ಅನುಮತಿ ಕೋರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ಲಿಬಿಯಾದಲ್ಲಿ ನೆಲೆಸಿರುವ ಸುಮಾರು 18,000 ಭಾರತೀಯರಲ್ಲಿ ಬಹುತೇಕರು ತೀವ್ರ ಗಲಭೆಪೀಡಿತ ನಗರಗಳಲ್ಲಿ ಒಂದಾದ ಟ್ರಿಪೊಲಿಯಲ್ಲೇ ವಾಸಿಸುತ್ತಿದ್ದಾರೆ.ವಿವಿಧ ನಿರ್ಮಾಣ ಕಂಪೆನಿಗಳಲ್ಲಿ ಸುಮಾರು ನಾಲ್ಕು ಸಾವಿರ ಭಾರತೀಯ ಸಿಬ್ಬಂದಿ ಇದ್ದಾರೆ. ಅವುಗಳ ಪ್ರತಿನಿಧಿಗಳು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರನ್ನು ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ಚರ್ಚಿಸಿದರು.  ‘ಎಲ್ಲ ಭಾರತೀಯರೂ ಸುರಕ್ಷಿತವಾಗಿದ್ದಾರೆ. ಬರಲು ಸಿದ್ಧವಿರುವವರನ್ನು ಯಾವುದೇ ವೆಚ್ಚವಿಲ್ಲದೆ ಕರೆತರಲಾಗುತ್ತದೆ’ ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry