ಲಿಬಿಯಾ: ಭಾರತೀಯರನ್ನು ಕರೆತರುವ ಕಾರ್ಯ ಆರಂಭ

7

ಲಿಬಿಯಾ: ಭಾರತೀಯರನ್ನು ಕರೆತರುವ ಕಾರ್ಯ ಆರಂಭ

Published:
Updated:

ನವದೆಹಲಿ (ಪಿಟಿಐ): ಸರ್ಕಾರ ವಿರೋಧಿ ಚಳವಳಿ ತೀವ್ರಗೊಂಡಿರುವ ಲಿಬಿಯಾದಿಂದ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಮೊದಲ ಹಂತದ ಕಾರ್ಯ ಶನಿವಾರ ಆರಂಭವಾಯಿತು. 280 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾರತೀಯ ಕಾಲಮಾನ ಸಂಜೆ 4.10ಕ್ಕೆ ಲಿಬಿಯಾದಿಂದ ಪ್ರಯಾಣ ಬೆಳೆಸಿತು.‘ಈ ಕಾರ್ಯಕ್ಕಾಗಿ ಎರಡು ಏರ್ ಇಂಡಿಯಾ ವಿಮಾನ ಮತ್ತು ನಾಲ್ಕು ಹಡಗುಗಳನ್ನು ಟ್ರಿಪೋಲಿಗೆ ಕಳುಹಿಸಲಾಗಿದೆ.ಭಾರತೀಯ ಪ್ರಜೆಗಳು ಶೀಘ್ರವೇ ನವದೆಹಲಿಗೆ ಆಗಮಿಸಲಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.ಐಎನ್‌ಎಸ್- ಜಲಾಶ್ವ ಮತ್ತು ಐಎನ್‌ಎಸ್- ಮೈಸೂರು ಎಂಬ ಹಡಗುಗಳು ಶನಿವಾರ ಬೆಳಿಗ್ಗೆ ಮುಂಬೈ ಬಂದರಿನಿಂದ ಪ್ರಯಾಣ ಬೆಳೆಸಿದ್ದು, 12 ದಿನಗಳಲ್ಲಿ ಲಿಬಿಯಾವನ್ನು ತಲುಪಲಿವೆ.ಸಾಧ್ಯವಾದಷ್ಟು ಶೀಘ್ರ ಮತ್ತು ಸುಗಮವಾಗಿ ಭಾರತೀಯರನ್ನು ಕರೆತರುವ ಉದ್ದೇಶದಿಂದ ಟ್ರಿಪೋಲಿಯಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಲಿಬಿಯಾದಲ್ಲಿ ಸುಮಾರು 18 ಸಾವಿರ ಭಾರತೀಯ ಪ್ರಜೆಗಳು ನೆಲೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry