ಲಿಮ್ಕಾ ದಾಖಲೆಗೆ ಹೆಸರು ಸೇರ್ಪಡೆ

7

ಲಿಮ್ಕಾ ದಾಖಲೆಗೆ ಹೆಸರು ಸೇರ್ಪಡೆ

Published:
Updated:

ಬೆಂಗಳೂರು: ವೇಗದ ಥ್ರೋ ಬಾಲ್‌ ಎಸೆತದಲ್ಲಿ ಡಾ.ಎಸ್‌.ರಮೇಶ್‌ ಬಾಬು ಮತ್ತು ಎಂ. ಸುರೇಶ್‌ ಅವರು ಒಂದು ನಿಮಿಷದಲ್ಲಿ 52 ಬಾರಿ ಥ್ರೋ ಬಾಲ್‌ ಎಸೆಯುವ ಮೂಲಕ ಲಿಮ್ಕಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಮೇಶ್‌ ಬಾಬು , ‘ನಗರದ ಗ್ರೀನ್‌ ಕಂಟ್ರಿ ಪಬ್ಲಿಕ್‌ ಶಾಲೆಯ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ನಡೆದ ಥ್ರೋ ಬಾಲ್‌ ಎಸೆತದಲ್ಲಿ ಈ ದಾಖಲೆಯನ್ನು ಮಾಡಲಾಗಿದೆ’ ಎಂದರು.‘ಇಂತಹ ದಾಖಲೆಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸರಿಯಾಗಿ ಸಹಕಾರವನ್ನು ನೀಡಿದರೆ, ಇನ್ನಷ್ಟು ಸಾಧನೆ ಮಾಡಬಹುದು. ಆದರೆ, ಕ್ರಿಕೆಟ್‌ಗೆ ನೀಡುವಷ್ಟು ಮಹತ್ವವನ್ನು ಬೇರೆ ಯಾವುದೇ ಕ್ರೀಡೆಗಳಿಗೆ ನೀಡುತ್ತಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry